ಉಪಯುಕ್ತ ಸುದ್ದಿ

KAS ಪ್ರಿಲಿಮ್ಸ್ ಪರೀಕ್ಷೆಯ ಫಲಿತಾಂಶ ಪ್ರಕಟ

Share It

ಬೆಂಗಳೂರು: ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ಆಯ್ಕೆಗೆ ನಡೆದಿದ್ದ ಪೂರ್ವಭಾವಿ ಮರುಪರೀಕ್ಷೆಯ ಫಲಿತಾಂಶವನ್ನು ಕೆಪಿಎಸ್‌ಸಿ ಸೋಮವಾರ ರಾತ್ರಿ ಪ್ರಕಟ ಮಾಡಿದೆ.

ಕೆಪಿಎಸ್‌ಸಿಯಿಂದ 384 ಗೆಜೆಟೆಡ್ ಹುದ್ದೆಗಳಿಗೆ ಪೂರ್ವಭಾವಿ ಪರೀಕ್ಷೆ ನಡೆಸಲಾಗಿತ್ತು. ಪರೀಕ್ಷೆ ಬರೆದಿದ್ದ ಅಭ್ಯರ್ಥಿಗಳ ಪೈಕಿ 5760 ಅಭ್ಯರ್ಥಿಗಳು ಮಖ್ಯ ಪರೀಕ್ಷೆಗೆ ಅರ್ಹರಾಗಿದ್ದಾರೆ ಎಂದು ಪಟ್ಟಿಯಲ್ಲಿ ಕೆಪಿಎಸ್‌ಸಿ ತಿಳಿಸಿದೆ.

ಪರೀಕ್ಷೆಯಲ್ಲಿ ಆಯ್ಕೆಯಾದ 1:15 ರ ಅನುಪಾತದ ಫಲಿತಾಂಶವನ್ನು ಕೆಪಿಎಸ್‌ಸಿ ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದ್ದು, ವೆಬ್‌ಸೈಟ್‌ ಮೂಲಕ ಫಲಿತಾಂಶವನ್ನು ನೋಡಬಹುದು.


Share It

You cannot copy content of this page