ಆನೇಕಲ್: ಪ್ರೀತಿ ಮಾಡುತ್ತಿದ್ದಾಳೆ ಎಂಬ ಕಾರಣಕ್ಕೆ ಪೋಷಕರೇ ಯುವತಿಯನ್ನು ಕರೆಯಲ್ಲಿ ಮುಳುಗಿಸಿ ಕೊಲೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಕರೆಯಲ್ಲಿ ಯುವತಿಯ ಶವ ಪತ್ತೆಯಾಗಿದ್ದು, ಆತ್ಮಹತ್ಯೆಯ ಶಂಕೆ ವ್ಯಕ್ತವಾಗಿತ್ತು. ಕುಟುಂಬಸ್ಥರು ಕೂಡ ಇದು ಆತ್ಮಹತ್ಯೆ ಎಂದು ಶವವನ್ನು ಸಂಸ್ಕಾರ ಮಾಡಲು ಸಿದ್ಧತೆ ನಡೆಸಿದ್ದರು.
ಆದರೆ, ಆಕೆಯ ಪ್ರಿಯಕರ ಇದು ಅವರ ಕುಟುಂಬಸ್ಥರೇ ಮಾಡಿರುವ ಕೊಲೆ ಎಂದು ಆರೋಪ ಮಾಡಿದ್ದಾನೆ. ನಮ್ಮಿಬ್ಬರ ನಡುವಿನ ಪ್ರೀತಿಯನ್ನು ಒಪ್ಪದ ಕುಟುಂಬಸ್ಥರು ಆಕೆಯನ್ನು ಕೊಲೆ ಮಾಡಿದ್ದಾರೆ. ಕರೆ ನೀರಿನಲ್ಲಿ ಕಾಲಿನಿಂದ ತಲೆ ಮುಳುಗಿಸಿ ಕೊಲೆ ಮಾಡಲಾಗಿದೆ ಎಂದು ಆರೋಪಿಸಿದ್ದಾನೆ.
ನಿತಿನ್ ಮತ್ತು ಯುವತಿ ಕಳೆದ ಒಂದು ವರ್ಷದಿಂದ ಪ್ರೀತಿಸುತ್ತಿದ್ದರು. ಇದ ಎರಡು ದಿನದ ಹಿಂದೆ ಯುವತಿಯ ಪೋಷಕರಿಗೆ ಗೊತ್ತಾಗಿತ್ತು. ನನ್ನ ಪ್ರಾಣ ಹೋದರೂ ನಿಮ್ಮ ಪ್ರೀತಿ ಒಪ್ಪುವುದಿಲ್ಲ ಎಂದು ಯುವತಿಯ ತಂದೆ ಹೇಳಿದ್ದರು.