ವಿಜಯಪುರ: ಭೀಮಾ ತೀರದ ಹಂತಕ ಭಾಗಪ್ಪ ಹರಿಜನ ಕೊಲೆ ಮಾಡಿದ್ದ ನಾಲ್ವರು ಆರೋಪಿಗಳನ್ನು ವಿಜಯಪುರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ವಿಜಯಪುರ ನಗರದಲ್ಲಿ ನಡೆದ ಭಾಗಪ್ಪ ಹರಿಜನ ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದ ಗಾಂಧಿ ಚೌಕ ಪೊಲೀಸರು, ಕೊಲೆ ನಡೆಸಿದ ನಾಲ್ವರನ್ನು ಬಂಧಿಸಿದ್ದಾರೆ. ಬಂಧಿತರನ್ನು ಪ್ರಕಾಶ್ ಆಲಿಯಾಸ್ ಪೀಂಟ್ಯಾ ಅಖರ್‌ಖೇಡ್(25), ರಾಹುಲ್ ತಳಕೇರಿ(20), ಮಣಿಕಂಠ ದನಕೊಪ್ಪ(27) ಸುದೀಪ್ ಕಾಂಬಳೆ(23) ಎಂದು ಹೇಳಲಾಗಿದೆ.
೨೦೨೪ರಲ್ಲಿ ಭಾಗಪ್ಪ ಶಿಷ್ಯನಿಂದ ಹತ್ಯೆಯಾಗಿದ್ದ ರವಿ ಅಗರ್‌ಖೇಡ್ ಸಹೋದರ ಪಿಂಟ್ಯಾ ಅಗರಖೇಡನೇ ಈ ಕೊಲೆಯ ಪ್ರಮುಖ ಸೂತ್ರದಾರ ಎಂದು ಹೇಳಲಾಗಿದೆ. ರವಿ ಅಗರ್‌ಖೇಡ್ ಕೊಲೆಗೆ ಪ್ರತೀಕಾರವಾಗಿ ಭಾಗಪ್ಪ ಹರಿಜನ ಕೊಲೆ ಮಾಡಲಾಗಿದೆ ಎಂದು ವಿಜಯಪುರ ಪೊಲೀಸ್ ವರಿಷ್ಠಾಧಿಕಾರಿ ಲಕ್ಷö್ಮಣ್ ನಿಂಬರಗಿ ತಿಳಿಸಿದ್ದಾರೆ.