ಹೂವಿನಹಡಗಲಿ : ಶ್ರೀಕ್ಷೇತ್ರ ಮೈಲಾರ ಲಿಂಗೇಶ್ವರ ಕಾರ್ಣಿಕ ಹೊರಬಿದ್ದಿದ್ದು, ತುಂಬಿದ ಕೊಡ ತುಳುಕೀತೆ ಪರಾಕ್’ ಎನ್ನುವ ಮೂಲಕ ಮುಂದೆ ಎಲ್ಲವೂ ಸುಭೀಕ್ಷವಾಗಿರಲಿದೆ ಎಂಬ ಭವಿಷ್ಯ ನುಡಿದಿದೆ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ.
ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲೂಕಿನಲ್ಲಿರುವ ಶ್ರೀಕ್ಷೇತ್ರ ಮೈಲಾರ ಲಿಂಗೇಶ್ವರನ ಕಾರ್ಣಿಕದಲ್ಲಿ ಈ ಭವಿಷ್ಯ ನುಡಿಯಲಾಗಿದೆ. ರಾಮಯ್ಯ ಗೊರವಯ್ಯ ಈ ಕಾರ್ಣಿಕ ನುಡಿದಿದ್ದು, ಮುಂದೆ ಎಲ್ಲವೂ ಒಳ್ಳೆಯದಾಗಲಿದೆ ಎನ್ನಲಾಗಿದೆ.
ರಾಜ್ಯ, ದೇಶದಲ್ಲಿ ಉತ್ತಮ ಮಳೆ-ಬೆಳೆ ಆಗಲಿದೆ. ಎಲ್ಲವೂ ಸುಭೀಕ್ಷವಾಗಿರಲಿದೆ ಎಂಬುದನ್ನು ಕಾರ್ಣಿಕ ಸೂಚಿಸಿದೆ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ.