ಕರೆಂಟ್ ಶಾಕ್ ನೀಡಲು ಬೆಸ್ಕಾಂ ಸಿದ್ಧತೆ: ಮೆಟ್ರೋ ಆಯ್ತು, ಈಗ ಬೆಸ್ಕಾಂ ಸರದಿ !
ಬೆಂಗಳೂರು: ವಿದ್ಯುತ್ ದರ ಏರಿಕೆಗೆ ಸಜ್ಜಾದ ಸರಕಾರ ಇದೀಗ, ಬೆಸ್ಕಾಂ ವ್ಯಾಪ್ತಿಯಲ್ಲಿನ ವಿದ್ಯುತ್ ದರ ಏರಿಕೆಗೆ ಸಿದ್ಧತೆ ನಡೆಸಿದೆ.
ಬೆಸ್ಕಾಂ ವಿದ್ಯುತ್ ದರ ಏರಿಕೆ ಮಾಡುವಂತೆ ಕೆಆರ್‌ಸಿಎಗೆ ಮನವಿ ಮಾಡಿಕೊಂಡಿದೆ. ಈ ಕುರಿತು ಪ್ರಸ್ತಾವನೆಯನ್ನು ಸಲ್ಲಿಕೆ ಮಾಡಿದೆ. ಬೆಸ್ಕಾಂ ಪ್ರಸ್ತಾವನೆಯಲ್ಲಿ 67 ರಿಂದ 91 ಪೈಸೆ ಏರಿಕೆಗೆ ಮನವಿ ಮಾಡಿದೆ.
ಬೆಸ್ಕಾಂನ ನಿರ್ಧಾರಕ್ಕೆ ಕೈಗಾರಿಕೋದ್ಯಮಿಗಳು ಕಿಡಿಕಾರಿದ್ದು, ಎಫ್‌ಕೆಸಿಸಿಐ ಬೆಸ್ಕಾಂನ ವಿದ್ಯುತ್ ದರ ಏರಿಕೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ. ಈ ನಡುವೆ ಬೆಸ್ಕಾಂ ಸಾರ್ವಜನಿಕ ಅಹವಾಲು ಸವೀಕರಿಸಲು ಸಿದ್ಧತೆ ನಡೆಸಿದೆ.


