ಮೋದಿ ಅಮೇರಿಕದಲ್ಲಿರುವಾಗಲೇ ಮತ್ತೆರೆಡು ವಿಮಾನದಲ್ಲಿ ಭಾರತೀಯ ವಲಸಿಗರು ವಾಪಸ್ !
ನವದೆಹಲಿ: ನರೇಂದ್ರ ಮೋದಿ ಅವರು ಅಮೇರಿಕ ಪ್ರವಾಸದಲ್ಲಿರುವ ಹೊತ್ತಿನಲ್ಲೇ ಮತ್ತೆರೆಡು ಸೇನಾ ವಾಹನಗಳು ಭಾರತೀಯ ಅಕ್ರಮ ವಲಸಿಗರನ್ನು ಹೊತ್ತು ಭಾರತದ ಕಡೆಗೆ ಧಾವಿಸಿವೆ.
ಫೆ 15 ಮತ್ತು 16 ರಂದು ಪಂಜಾಬ್ನ ಅಮೃತಸರಕ್ಕೆ ಈ ಎರಡು ಸೇನಾ ವಾನಹಗಳು ಬಂದಿಳಿಯಲಿದ್ದು, ಪಂಜಾಬ್, ಹರಿಯಾಣ, ಗುಜರಾತ್, ಮಹಾರಾಷ್ಟ್ರ ಉತ್ತರ ಪ್ರದೇಶ ಮತ್ತು ಚಂಡೀಗಢದ 119 ವಲಸಿಗರ 2 ನೇ ಬ್ಯಾಚ್ ಅನ್ನು ಅಮೇರಿಕ ಭಾರತಕ್ಕೆ ರವಾನಿಸಿದೆ.
ಪಿಟಿಐ ಅಧಿಕೃತ ಮಾಹಿತಿಗಳ ಪ್ರಕಾರ ವಿಮಾನವು ಶನಿವಾರ ರಾತ್ರಿ ಸುಮಾರು 10 ಗಂಟೆಗೆ ವಿಮಾನ ನಿಲ್ದಾಣಕ್ಕೆ ಬಂದಿಳಿಯಲಿದೆ. ಇದರಲ್ಲಿ 67 ಮಂದಿ ಪಂಜಾಬ್, 33 ಮಂದಿ ಹರಿಯಾಣ, ಎಂಟು ಮಂದಿ ಗುಜರಾತ್, ಮೂವರು ಉತ್ತರಪ್ರದೇಶ, ಗೋವಾ, ಮಹಾರಾಷ್ಟ್ರ ಮತ್ತು ರಾಜಸ್ಥಾನದ ತಲಾ ಇಬ್ಬರು ಮತ್ತು ಹಿಮಾಚಲ ಪ್ರದೇಶ ಮತ್ತು ಜಮ್ಮುಕಾಶ್ಮೀರದ ತಲಾ ಒಬ್ಬರು ಇದ್ದಾರೆ ಎಂದು ವರದಿ ತಿಳಿಸಿದೆ.
ಈ ಮೊದಲು 104 ಅಕ್ರಮ ಭಾರತೀಯರನ್ನು ಹೊತ್ತ ಅಮೇರಿಕದ ಮಿಲಟರಿ ವಿಮಾನ ಅಮೃತಸರದ ಶ್ರೀ ಗುರು ರಾಮದಾಸ್ ಜಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದಿತ್ತು. ಇದರಲ್ಲಿ 30 ಜನ ಪಂಜಾಬ್, ಹರಿಯಾಣ ಮತ್ತು ಗುಜರಾತ್ನ ತಲಾ 33 ಜನ ಹಾಗೂ ಮೂವರು ಮಹಾರಾಷ್ಟ್ರ ಮತ್ತು ಉತ್ತರ ಪ್ರದೇಶದವರು ಹಾಗೂ ಇಬ್ಬರು ಚಂಡೀಗಢದವರಿದ್ದರು.


