ಉತ್ತರ ಪ್ರದೇಶದಲ್ಲಿ ಭೀಕರ ಅಪಘಾತ: ಕುಂಭಮೇಳಕ್ಕೆ ಬರುತ್ತಿದ್ದ 10 ಪ್ರಯಾಣಿಕರು ಸಾವು
ಪ್ರಯಾಗ್ ರಾಜ್: ಕುಂಭಮೇಳದಲ್ಲಿ ಪವಿತ್ರ ಸ್ನಾನದ ಸಲುವಾಗಿ ಆಗಮಿಸುತ್ತಿದ್ದ ವೇಳೆ ಸಂಭವಿಸಿದ ಅಪಘಾತದಲ್ಲಿ 10 ಜನರು ದುರ್ಮರಣ ಹೊಂದಿರುವ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.
ಉತ್ತರ ಪ್ರದೇಶದ ಮಿರ್ಜಾಪುರ-ಪ್ರಯಾಗ್ ರಾಜ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಬುಲೇರೋ ವಾಹನ ಮತ್ತು ಬಸ್ ನಡುವೆ ಅಪಘಾತ ನಡೆದಿದ್ದು, ಘಟನೆಯಲ್ಲಿ ಛತ್ತೀಸ್‌ಘಡ ರಾಜ್ಯದ ಕೊರ್ಬಾ ಜಿಲ್ಲೆಯ 10 ಜನರು ಸ್ಥಳದಲ್ಲಿಯೇ ಮರಣ ಹೊಂದಿದ್ದಾರೆ. 19 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದು ಸ್ಥಳೀಯ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಛತ್ತೀಸ್‌ಘಡದಿಂದ ಪ್ರಯಾಗ್‌ರಾಜ್‌ನ ಕುಂಭಮೇಳದಲ್ಲಿ ಭಾಗವಹಿಸಿ, ಪವಿತ್ರ ಸ್ನಾನ ಮಾಡಲು ಬೊಲೇರೋ ವಾಹನದಲ್ಲಿ ಹತ್ತು ಜನರು ಆಗಮಿಸುತ್ತಿದ್ದರು. ಘಟನೆಯಲ್ಲಿ ವಾಹನದಲ್ಲಿದ್ದ ಹತ್ತೂ ಜನರು ಮೃತಪಟ್ಟಿದ್ದಾರೆ. ಬಸ್‌ನಲ್ಲಿದ್ದ 19 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.


