ಬೆಳಗಾವಿಯಲ್ಲಿ ಗೋವಾ ಮಾಜಿ ಶಾಸಕನ ಕೊಲೆ : ಕ್ಷುಲ್ಲಕ ಕಾರಣದಿಂದ ಮಾರಣಾಂತಿಕ ಹಲ್ಲೆ
ಬೆಳಗಾವಿ : ಗೋವಾ ರಾಜ್ಯದ ಶಾಸಕರೊಬ್ಬರನ್ನು ಕ್ಷುಲ್ಲಕ ಕಾರಣದ ಹಿನ್ನೆಲೆಯಲ್ಲಿ ಮಾರಾಣಾಂತಿಕ ಹಲ್ಲೆ ಮಾಡಿ ಕೊಲೆ ಮಾಡಿರುವ ಘಟನೆ ಬೆಳಗಾವಿ ನಗರದಲ್ಲಿ ಶನಿವಾರ ನಡೆದಿದೆ.
ಬೆಳಗಾವಿಯ ಖಡೇಬಜಾರ್ ಮಾರುಕಟ್ಟೆಯ ಶ್ರೀನಿವಾಸ ವಸತಿ ಗೃಹ (ಲಾಡ್ಜ್) ಈ ಘಟನೆ ನಡೆದಿದೆ. ಆಟೊ ಚಾಲಕ ಹಾಗೂ ಗೋವಾ ರಾಜ್ಯದ ಮಾಜಿ ಶಾಸಕ ಲಾವು ಮಾಮಲೇದಾರ ನಡುವೆ ಕ್ಷುಲ್ಲಕ ಕಾರಣಕ್ಕಾಗಿ ಮಾತಿನ ಚಕಮಕಿ ನಡೆದು ಕೊನೆಯಲ್ಲಿ ಅಟೋ ಚಾಲಕನಿಂದ ಗೋವಾ ಮಾಜಿ ಶಾಸಕನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ ಹಿನ್ನೆಲೆಯಲ್ಲಿ ಗೋವಾ ಮಾಜಿ ಶಾಸಕ ಕುಸಿದು ಬಿದ್ದು ಸ್ಥಳದಲ್ಲಿ ಸಾವಿಗೀಡಾಗಿದ್ದಾರೆ ಎಂದು ತಿಳಿದುಬಂದಿದೆ.


