ಬೋಪಾಲ್: ಹೆತ್ತ ತಾಯಿಯೇ ಹೆಣ್ಣು ಎಂಬ ಕಾರಣಕ್ಕೆ ಕತ್ತು ಸೀಳಿ ಬಿಸಾಕಿದ್ದ ಮಗುವನ್ನು ಒಂದು ತಿಂಗಳಿAದ ಶಸ್ತçಚಿಕಿತ್ಸೆ ನಡೆಸಿ, ಹಾರೈಕೆ ಮಾಡಿ ಬದುಕುಳಿಸುವಲ್ಲಿ ವೈದ್ಯರು ಯಶಸ್ವಿಯಾಗಿದ್ದಾರೆ.
ಇಲ್ಲಿನ ಕಮಲಾ ನೆಹಸರು ಆಸ್ಪತ್ರೆಯ ವೈದ್ಯರ ಸಾಹಸಕ್ಕೆ ಸಮುದಾಯ ಶಹಬ್ಬಾಸ್ ಎಂದಿದೆ. ತೊಟ್ಟಿಯಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ಪುಟ್ಟ ಕಂದನಿಗೆ ಶುಕ್ರವಾರ ಮರುಹುಟ್ಟು ನೀಡಿದ್ದಾರೆ. ತಿಂಗಳ ನಂತರ ಮಗು ಸಾವು ಗೆದ್ದ ಸಂಭ್ರಮವನ್ನು ವೈದ್ಯಕೀಯ ಸಿಬ್ಬಂದಿ ಆಚರಿಸಿದ್ದಾರೆ.
ಜ.೧೧ರಂದು ಬೋಪಾಲ್ನ ೧೦೦ ಕಿ.ಮೀ ದೂರದ ರಾಜ್ಗಢ ಜಿಲ್ಲೆಯ ಕಸದ ತೊಟ್ಟಿಯಲ್ಲಿ ಶಿಶುವೊಂದು ಪತ್ತೆಯಾಗಿತ್ತು. ಹೆಣಣೂ ಮಗುವೆಂಬ ಕಾರಣಕ್ಕೆ ಅದರ ಗಂಟಲು ಸೀಳಿ ಬಿಸಾಡಿದ್ದರು. ಹೀಗಾಗಿ, ರಕ್ತಸ್ರಾವ ಆಗುತ್ತಲೇ ಇತ್ತು. ಹೀಗಾಗಿ, ಬೋಪಾಲ್ ಜಿಲ್ಲಾಸ್ಪತ್ರೆಗೆ ಕರೆತಂದು ಚಿಕಿತ್ಸೆ ನೀಡಲಾಯಿತು.
ಡಾ. ಧೀರೇಂದ್ರ ಶ್ರೀವಾಸ್ತವ್ ಮತ್ತು ತಂಡ ಮಗುವಿಗೆ ಶಸ್ತçಚಿಕಿತ್ಸೆ ನಡೆಸಿದರು. ಮಗುವಿನ ಪ್ರಮುಖ ರಕ್ತನಾಳಗಳು ಮತ್ತು ಅಪದಮನಿಗಳು ತುಂಡಾಗಿದ್ದವು. ಆದರೆ, ಶಸ್ತçಚಿಕಿತ್ಸೆ ಮಾಡುವ ಮೂಲಕ ಎಲ್ಲ ರಕ್ತನಾಳಗಳನ್ನು ಸೇರಿಸುವ ಕೆಲಸವನ್ನು ವೈದ್ಯರು ಮಾಡಿದರು. ಪವಾಡಸದೃಶ್ಯ ರೀತಿಯಲ್ಲಿ ಮಗು ಚೇತರಿಸಿಕೊಳ್ಳತೊಡಿತು.
ವೈದ್ಯರ ಪ್ರಯತ್ನ ಮತ್ತು ಸಿಬ್ಬಂದಿಯ ಹಾರೈಕೆಯಿಂದ ಒಂದು ತಿಂಗಳಿAದ ಮಗು ಅಪಾಯದಿಂದ ಪಾರಾಗಿದೆ. ವೈದ್ಯಕೀಯ ಸಿಬ್ಬಂದಿ ಮಗುವಿಗೆ ಪಿಹು ಎಂದು ಹೆಸರಿಟ್ಟಿದ್ದಾರೆ. ಇದೀಗ ಮಗುವನ್ನು ಮಕ್ಕಳ ಕಲ್ಯಾಣ ಸಮಿತಿಯ ಅನುಮತಿಯೊಂದಿಗೆ ರಾಜಘಡದಲ್ಲಿರುವ ಆಶ್ರಯ ಗೃಹಕ್ಕೆ ಬಿಡಲಾಗಿದೆ.
ಮಗುವನ್ನು ಕಸದ ತೊಟ್ಟಿಗೆ ಬಿಸಾಕಿದ್ದ ಆರೋಪದಲ್ಲಿ ತಾಯಿ ಮತ್ತು ಅಜ್ಜಿಯನ್ನು ಬಂಧಿಸಿ, ಅವರ ಮೇಲೆ ಕೊಲೆ ಯತ್ನ ಮತ್ತು ಮಗುವನ್ನು ತ್ಯಜ್ಯಿಸಿದ ಆರೋಪ ಹೊರಸಿಲಾಗಿದೆ. ಮಧ್ಯಪ್ರದೇಶ ಇಡೀ ದೇಶದಲ್ಲೇ ನವಜಾತ ಶಿಶುಗಳನ್ನು ಬಿಸಾಡುವ ರಾಜ್ಯಗಳ ಪೈಕಿ ದೇಶದ ಮೊದಲ ಸ್ಥಾನದಲ್ಲಿದೆ.
ರಾಜ್ಯದಲ್ಲಿ ಪ್ರತಿ ಎರಡು ದಿನಕ್ಕೊಂದು ಮಗುವನ್ನು ಬಿಸಾಡುವ ಪ್ರಕರಣ ವರದಿಯಾಗುತ್ತಿದೆ. ಪ್ರಕರಣಗಳಲ್ಲಿ ಬಹುತೇಕ ಮಕ್ಕಳನ್ನು ನಾಯಿಗಳು, ಕಾಡು ಪ್ರಾಣಿಗಳು ತಿಂದು ಸಾಯಿಸುತ್ತವೆ. ೨೦೨೨ರ ಎನ್ಸಿಆರ್ಬಿ ವರದಿ ಪ್ರಕಾರ ಮಧ್ಯಪ್ರದೇಶದಲ್ಲಿ ೧೭೫ ನವಜಾತ ಶಿಶುಗಳನ್ನು ಬಿಸಾಡಲಾಗಿದೆ. ಇದಕ್ಕೆ ಸಂಬAಧಿಸಿ ೧೭೪ ಪ್ರಕರಣ ದಾಖಲಾಗಿದ್ದು, ಇದು ದೇಶಲ್ಲಿಯೇ ಅತ್ಯಧಿಕ ಎನಿಸಿಕೊಂಡಿದೆ.