ಬೆAಗಳೂರು: ಕೆಎಎಸ್ ಅಧಿಕಾರಿಯೊಬ್ಬರ ನೇಮಕಕ್ಕೆ ಸಂಬAಧಿಸಿದAತೆ ಸಿಎಂ ಕಚೇರಿಯ ಟಿಪ್ಪಣಿಯನ್ನೇ ನಕಲು ಮಾಡಿದ್ದ ಆರೋಪದಲ್ಲಿ ವ್ಯಕ್ತಿಯೊಬ್ಬನನ್ನು ವಿಧಾನಸೌಧ ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಬಂಧಿತ ವ್ಯಕ್ತಿ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ಮೂಲದ ರಾಘವೇಂದ್ರ ಎನ್ನಲಾಗಿದೆ. ಸಚಿವಾಲಯದಿಂದ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಈ ಕುರಿತು ದೂರು ದಾಖಲಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ರಾಘವೇಂದ್ರನನ್ನು ಬಂಧಿಸಿರುವ ಪೊಲೀಸರು, ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.
ವಿವಿಧ ಶಾಸಕರ ಬಳಿ ಪಿಎ ಆಗಿ ಕೆಲಸ ಮಾಡಿದ್ದ ರಾಘವೇಂದ್ರ, ಸಿಎಂ ಕಚೇರಿ ನಕಲಿ ಟಿಪ್ಪಣಿ ಸೃಷ್ಟಿಸಿದ್ದಲ್ಲದೆ, ಪೋಸ್ಟಿಂಗ್ ಕೊಡಿಸುವ ಸಲುವಾಗಿ ಅನೇಕರಿಗೆ ವಂಚನೆ ಮಾಡಿರುವ ದೂರುಗಳು ಕೇಳಿಬಂದಿವೆ.