ಬೆಂಗಳೂರು: ಮೈಕ್ರೋ ಫೈನಾನ್ಸ್ ಕಂಪನಿಯ ರಿಕವರಿ ಏಜೆಂಟ್ ಗಳು ಗೂಂಡಾಗಿರಿ ನಡೆಸಿದ್ದು, ವ್ಯಕ್ತಿಯೊಬ್ಬರಿಗೆ ಥಳಿಸಿರುವ ಘಟನೆ ನಡೆದಿದೆ.
ಮೊಹಮದ್ ಅಜರ್ ಎಂಬಾತನಿಗೆ ಥಳಿಸಿದ್ದ ಆರೋಪದಲ್ಲಿ ಇಬ್ಬರು ರಿಕವರಿ ಏಜೆಂಟ್ ಗಳನ್ನು ಪೊಲೀಸರು ಬಂಧಿಸಿದ್ದು, ಬಜಾಜ್ ಫೈನಾನ್ಸ್ ಮ್ಯಾನೇಜರ್ ಗಾಗಿ ಶೋಧ ನಡೆಯುತ್ತಿದೆ.
ಅಜರ್, ಬಜಾಜ್ ಫೈನಾನ್ಸ್ ನಲ್ಲಿ 1,66,000 ರು. ಸಾಲ ಪಡೆದಿದ್ದರು. ಪ್ರತಿ ತಿಂಗಳು 7 ಸಾವಿರ ಕಂತು ಕಟ್ಟುತ್ತಿದ್ದರು. ಕಳೆದ 5 ರಂದು ಕಟ್ಟಬೇಕಿದ್ದ ಕಂತು ಕಟ್ಟಲು ಸಾಧ್ಯವಾಗಿರಲಿಲ್ಲ. 10 ದಿನ ತಡವಾದ ಕಾರಣಕ್ಕೆ ಮನೆಯ ಬಳಿ ಬಂದ ಏಜೆಂಟ್ ಗಳು ಅಜರ್ ಮೇಲೆ ಹಲ್ಲೆ ನಡೆಸಿದ್ದಾರೆ.
ಹಲ್ಲೆ ನಡೆದಿರುವ ಕುರಿತು ದೂರು ದಾಖಲಾಗಿದ್ದು, ಹಲ್ಲೆಯ ವಿಡಿಯೋ ಕೂಡ ವೈರಲ್ ಆಗಿದೆ. ಇದರ ಆಧಾರದಲ್ಲಿ ಪೊಲೀಸರು ರಿಕವರಿ ಏಜೆಂಟ್ ಗಳನ್ನು ಬಂಧಿಸಿದ್ದಾರೆ. ಬಜಾಜ್ ಫೈನಾನ್ಸ್ ನ ಮ್ಯಾನೇಜರ್ ತಪ್ಪಿಸಿಕೊಂಡಿದ್ದು, ಆತನಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.
Updating…