ಕರ್ತವ್ಯ ಲೋಪ ಹಿನ್ನೆಲೆಯಲ್ಲಿ ಮೂವರು ಪೊಲೀಸರ ಅಮಾನತು

Share It

ದಾವಣಗೆರೆ: ಕರ್ತವ್ಯ ಲೋಪ ಸಾಭೀತಾದ ಹಿನ್ನೆಲೆಯಲ್ಲಿ ಮೂವರು ಪೊಲೀಸ್ ಪೇದೆಗಳನ್ನು ಅಮಾನತುಗೊಳಿಸಿ ಆದೇಶಿಸಲಾಗಿದೆ.

ಪಿ.ಆಕಾಶ್, ಆರ್‌ಎಂಸಿ ಠಾಣೆಯ ಚಂದ್ರಶೇಖರ್ ಹಾಗೂ ಮತ್ತೊಬ್ಬ ಪೇದೆಯನ್ನು ಅಮಾನತು ಮಾಡಿ ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾಪ್ರಶಾಂತ್ ಆದೇಶ ಮಾಡಿದ್ದಾರೆ. ಈ ಮೂವರ ವಿರುದ್ಧ ಕರ್ತವ್ಯ ಲೋಪ ಆರೋಪ ಕೇಳಿಬಂದಿತ್ತು.

ಜ.29 ರಂದು ದಾವಣಗೆರೆಯ ಮಂಡಿಪೇಟೆಯಲ್ಲಿ ನಡೆದಿದ್ದ ಕಳ್ಳತನದ ಘಟನೆ ವಿಚಾರದಲ್ಲಿ ಕರ್ತವ್ಯಲೋಪ ಎಸಗಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಚಿನ್ನದ ಅಂಗಡಿಯಲ್ಲಿ 18 ಲಕ್ಷ ರು. ಕಳ್ಳತನ ನಡೆದಿತ್ತು. ಈ ವೇಳೆ ಗಸ್ತು ಸೇವೆಯಲ್ಲಿ ಕರ್ತವ್ಯಲೋಪ ಮಾಡಿರುವುದು ಸಾಭೀತಾಗಿದೆ.


Share It

You May Have Missed

You cannot copy content of this page