ಜಮೀನು ವಿವಾದದ ಹಿನ್ನೆಲೆ : ಎರಡು ಕುಟುಂಬದ ನಡುವೆ ಗಲಾಟೆ
ಕೋಲಾರ: ಜಮೀನು ವ್ಯಾಜ್ಯದ ಹಿನ್ನೆಲೆಯಲ್ಲಿ ಎರಡು ಕುಟುಂಬದ ನಡುವೆ ಗಲಾಟೆ ನಡೆದಿದ್ದು, ವ್ಯಕ್ತಿಯೊಬ್ಬರಿಗೆ ಗಾಯಗಳಾಗಿದ್ದು ಆಸ್ಪತ್ರೆಗೆ ಸೇರಿಸಲಾಗಿದೆ.
ಅಶೋಕ್ ಮತ್ತು ಉಷಾ ಎಂಬುವವರ ನಡುವೆ ಜಮೀನು ವಿವಾದವಿತ್ತು. ಕಳೆದ ಏಳು ವರ್ಷದಿಂದ ಕೋರ್ಟ್ನಲ್ಲಿ ವಿಚಾರಣೆ ನಡೆಯುತ್ತಿತ್ತು. ಈ ವೇಳೆ ಜಮೀನಿನಲ್ಲಿ ಕೆಲಸ ಮಾಡಲು ಅಶೋಕ್ ಹೋಗಿದ್ದಾಗ ಅವರ ಮೇಲೆ ಹಲ್ಲೆ ನಡೆದಿದೆ ಎಂದು ಆರೋಪಿಸಲಾಗಿದೆ.
ಗಲಾಟೆ ವೇಳೆ ಅಶೋಕ್ಗೆ ಗಾಯಗಳಾಗಿದ್ದು, ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಉಷಾ ಅವರ ಕಡೆಯವರಾದ ಗಗನ್ ಮತ್ತು ನಿಶಾನ್ ಎಂಬುವವರಿAದ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.


