ರೇಖಾ ಗುಪ್ತಾ ದೆಹಲಿಯ ನಾಲ್ಕನೇ ಮಹಿಳಾ ಸಿಎಂ; ರಾಜಧಾನಿಗೆ ಮಹಿಳಾ ಸಿಎಂಗಳ ಮೇಲೆ ಒಲವು !
ಬೆಂಗಳೂರು: ದೆಹಲಿಗೆ ನಾಲ್ಕನೇ ಬಾರಿಗೆ ಮಹಿಳಾ ಸಿಎಂ ಆಯ್ಕೆಯಾಗುತ್ತಿರುವುದು ದಾಖಲೆ ಬರೆದಿದೆ. ರೇಖಾ ಗುಪ್ತಾ ದೆಹಲಿಯ ನಾಲ್ಕನೇ ಮತ್ತು ಬಿಜೆಪಿಯ ಎರಡನೇ ಸಿಎಂ ಆಗಿ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ.
ಈ ಹಿಂದೆ ಬಿಜೆಪಿಯಿಂದ ಸುಷ್ಮಾ ಸ್ವರಾಜ್ ದೆಹಲಿಯ ಸಿಎಂ ಆಗಿದ್ದರು. ಅಲ್ಲಿಂದಲೇ ಅವರು ರಾಷ್ಟ್ರದ ರಾಜಕಾರಣಕ್ಕೆ ಪಾದಾರ್ಪಣೆ ಮಾಡಿ, ವಿದೇಶಾಂಗ ಸಚಿವೆಯಾಗಿ, ರಕ್ಷಣಾ ಸಚಿವೆಯಾಗಿ ದಾಖಲೆ ನಿರ್ಮಿಸಿದ್ದರು. ಇದೀಗ ರೇಖಾ ಗುಪ್ತ ದೆಹಲಿಯ ಮತ್ತೊಬ್ಬ ಮಹಿಳಾ ಸಿಎಂ ಆಗಲಿದ್ದಾರೆ.
ಪ್ರಸ್ತುತ ಚುನಾವಣೆಗೆ ಮೊದಲು ಎಎಪಿಯ ಅತಿಶಿ ಮುಖ್ಯಮಂತ್ರಿಯಾಗಿದ್ದರು. ಕಾಂಗ್ರೆಸ್ ನಿಂದ ಶೀಲಾ ಧೀಕ್ಷಿತ್ ಸಿಎಂ ಆಗಿದ್ದರು. ಇದೀಗ ರೆಖಾ ಗುಪ್ತ ನಾಲ್ಕನೇ ಮಹಿಳಾ ಸಿಎಂ ಆಗಿ ಪ್ರಮಾಣವಚನ ಸ್ವೀಕಾರ ಮಾಡಲಿದ್ದಾರೆ.


