ಕೊಲ್ಕತ್ತಾ: ಮಾಜಿ ಟೀಂ ಇಂಡಿಯಾ ಕ್ಯಾಪ್ಟನ್ ಸೌರವ್ ಗಂಗೂಲಿ ಕಾರು ಅಪಘಾತಕ್ಕೀಡಾಗಿದ್ದು, ಗಂಗೂಲಿ ಪ್ರಣಾಪಾಯದಿಂದ ಪಾರಾಗಿದ್ದಾರೆ ಎಂದು ವರದಿಯಾಗಿದೆ.
ದುರ್ಗಾಪುರ ಎಕ್ಸ್ಪ್ರೆಸ್ ಹೈವೆಯಲ್ಲಿ ಘಟನೆ ನಡೆದಿದ್ದು, ಲಾರಿಯೊಂದು ಅವರ ಬೆಂಗಾವಲು ವಾಹನವನ್ನು ಇದ್ದಕ್ಕಿದ್ದಂತೆ ಹಿಂದಿಕ್ಕಿದ್ದರಿAದ ಹಠಾತನ್ನೆ ಬ್ರೇಕ್ ಹಾಕಿದಾಗ ಘಟನೆ ನಡೆದಿದೆ. ಆಗ ಬೆಂಗಾವಲು ಪಡೆಯಲ್ಲಿದ್ದ ಹಿಂದಿನ ವಾಹನಗಳು ಡಿಕ್ಕಿ ಹೊಡೆದಿವೆ.
ಬರ್ದ್ವಾನ್ ವಿಶ್ವವಿದ್ಯಾನಿಲಯದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಅವರು ತೆರಳುತ್ತಿದ್ದ ವೇಳೆ ಘಟನೆ ಸಂಭವಿಸಿದ್ದು, ಕಾರಿಗೆ ಸಣ್ಣಪುಟ್ಟ ಹಾನಿಯಾಗಿದೆ. ಕೆಲಕಾಲದ ನಂತರ ಗಂಗೂಲಿ ಮತ್ತೇ ಪ್ರಯಾಣ ಬೆಳೆಸಿದ್ದು, ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ ಎಂದು ವರದಿಯಾಗಿದೆ.
ಘಟನೆಯಲ್ಲಿ ಯಾವುದೇ ತೊಂದರೆಯಾಗದೆ ಗಂಗೂಲಿ ಪಾರಾಗಿರುವುದು ಅಭಿಮಾನಿಗಳ ಆತಂಕವನ್ನು ದೂರ ಮಾಡಿದೆ.