ಬೀದರ್: ಪ್ರಯಾಗ್ ರಾಜ್‌ನ ಕುಂಭಮೇಳಕ್ಕೆ ತೆರಳಿದ್ದ ಬೀದರ್ ಮೂಲದ ಐವರು ಕಾಶಿ ಬಳಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ಉತ್ತರ ಪ್ರದೇಶದ ರಾಷ್ಟಿçÃಯ ಹೆದ್ದಾರಿ ಮಿರಾಜ್‌ಪೂರ್ ಜಿಲ್ಲೆಯ ರೂಪಾಪುರ ಬಳಿ ನಡೆದ ಅಪಘಾತದಲ್ಲಿ ಹಲವಾರು ಮಂದಿ ಗಾಯಗೊಂಡಿದ್ದಾರೆ ಎನ್ನಲಾಗಿದೆ. ಕಾಶಿಯಿಂದ 20 ಕಿ.ಮೀ ದೂರದಲ್ಲಿ ಲಾರಿಗೆ ಕ್ರೂಸರ್ ವಾಹನ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ ಎನ್ನಲಾಗಿದೆ.
ಘಟನೆಯಲ್ಲಿ ಬೀದರ್ ಮೂಲದ ಐದು ಜನರು ಮೃತಪಟ್ಟಿದ್ದು, ಏಳು ಜನರ ಸ್ಥಿತಿ ಗಂಭೀರವಾಗಿದೆ. ಮೃತರನ್ನು ಸಂತೋಷ್(45) ಸುನೀತಾ(40) ನೀಲಮ್ಮ(62) ಎಂದು ಗುರುತಿಸಲಾಗಿದ್ದು, ಮೃತರೆಲ್ಲರೂ ಒಂದೇ ಕುಟುಂಬದವರು ಎಂದು ಹೇಳಲಾಗಿದೆ.
ಬೀದರ್‌ನಿಂದ ಕ್ರೂಸರ್‌ನಲ್ಲಿ ತೆರಳಿದ್ದ ಕುಟುಂಬ: ಕಳೆದ ಎರಡು ದಿನಗಳ ಹಿಂದೆ ಬೀದರ್‌ನಿಂದ ಕುಂಭಮೇಳಕ್ಕೆ ಒಂದೇ ವಾಹನದಲ್ಲಿ12 ಜನರು ತೆರಳಿದ್ದರು. ಮಿರ್ಜಾ ಮುರಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕರ್ನಾಟಕ ಸರಕಾರಕ್ಕೆ ಮಾಹಿತಿ ನೀಡಿದ್ದಾರೆ. ಗಾಯಾಳುಗಳನ್ನು ಬನಾರಸ್‌ನ ಹಿಂದೂ ವಿವಿ ಅಪಘಾತ ಕೇಂದ್ರಕ್ಕೆ ದಾಖಲಿಸಲಾಗಿದ್ದು, ಶವಪರೀಕ್ಷೆಯನ್ನು ನಡೆಸಿ, ಹಸ್ತಾಂತರಿಸಲು ತಯಾರಿ ನಡೆದಿದೆ.