ಬೆಂಗಳೂರು: ಮುಜರಾಯಿ ಇಲಾಖೆ ವ್ಯಾಪ್ತಿಯ ಎ ಮತ್ತು ಬಿ ವರ್ಗದ ದೇವಾಲಯಗಳಲ್ಲಿ ಕಾರ್ಯನಿರ್ವಹಿಸುವ ಆಡಳಿತಾಧಿಕಾರಿಗಳು ಮತ್ತು ಇತರೆ ಸಿಬ್ಬಂದಿಗಳಿಗೆ ಸರಕಾರದಿಂದಲೇ ವೇತನ ನೀಡಲು ತೀರ್ಮಾನಿಸಲಾಗಿದೆ.
ಈ ಹಿಂದೆ ಆಯಾ ದೇವಸ್ಥಾನಗಳಲ್ಲಿ ಸಂಗ್ರಹವಾಗುವ ಹಣದಲ್ಲಿಯೇ ವೇತನ ನೀಡಲಾಗುತ್ತಿದ್ದು, ಇದೀಗ ಸರಕಾರ ಅವರಿಗೆ ಸರಕಾರದ ಸಂಚಿತ ನಿಧಿಯಿಂದಲೇ ವೇತನ ಪಾವತಿ ಮಾಡಲು ತೀರ್ಮಾನಿಸಿದೆ. ಈ ಸಂಬAಧ ಸುತ್ತೋಲೆ ಹೊರಡಿಸಿದ್ದು, ಸರಕಾರದ ನಿರ್ಧಾರವನ್ನು ಮುಜರಾಯಿ ಇಲಾಖೆ ದೇವಸ್ಥಾನಗಳ ಅರ್ಚಕರ ಸಂಘ ಶ್ಲಾಘಿಸಿದೆ.
ಈ ನಿರ್ಧಾರದ ಹಿಂದೆ ಮುಜರಾಯಿ ಮತ್ತು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರಿದ್ದು, ಕರ್ನಾಟಕ ರಾಜ್ಯ ಮುಜರಾಯಿ ದೇವಾಲಯಗಳ ಅರ್ಚಕರ ಆಗಮಿಕರ ಮತ್ತು ನೌಕರರ ಸಂಘ (ರಿ)ದ ಅಧ್ಯಕ್ಷರಾದ ಶ್ರೀವತ್ಸ ಅವರು ಧನ್ಯವಾದ ತಿಳಿಸಿದ್ದಾರೆ. ಮುಜರಾಯಿ ಇಲಾಖೆ ಇತಿಹಾಸದಲ್ಲೇ ಎ ಮತ್ತು ಬಿ ವರ್ಗಗಳ ದೇವಾಲಯಗಳಲ್ಲಿ ಪ್ರತಿ ತಿಂಗಳು ರೂ 2 ಕೋಟಿಯಿಂದ 3 ಕೋಟಿಯವರಿಗೂ ಉಳಿತಾಯವಾಗಲಿದೆ ಎಂದು ತಿಳಿಸಿದ್ದಾರೆ.
ಅರ್ಚಕರ ಸಂಘವು 2020 ರಲ್ಲಿ ರಾಜ್ಯದ ಎ ಮತ್ತು ಬಿ ವರ್ಗಗಳ ದೇವಾಲಯಗಳ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಸರ್ಕಾರಿ ನೌಕರರಿಗೆ ದೇವಾಲಯಗಳ ಹಣದಿಂದ ಕಾಯ್ದೆ ನಿಯಮಗಳ ಪ್ರಕಾರ ವೇತನ ಇತರೆ ಸೌಲಭ್ಯಗಳನ್ನು ಕೊಡುವಂತಿಲ್ಲ. ಸರ್ಕಾರದ ಸಂಚಿತ ನಿಧಿಯಿಂದ ನೀಡಬೇಕೆಂದು ಇರುತ್ತದೆ. ಸಂಘವು 2020 ರಲ್ಲಿ ಮುಖ್ಯಮಂತ್ರಿಗಳಿಗೂ, ಮುಜರಾಯಿ ಸಚಿವರಿಗೂ. ಮುಖ್ಯ ಕಾರ್ಯದರ್ಶಿಗಳಿಗೂ ಆರ್ಥಿಕ ಇಲಾಖೆಯ ಪ್ರಧಾನಕಾರ್ಯದರ್ಶಿಗಳಿಗೂ, ಮುಜರಾಯಿ ಇಲಾಖೆಯ ಪ್ರ.ಕಾರ್ಯದರ್ಶಿಗಳಿಗೂ ಮನವಿ ಮಾಡಿತ್ತು.
ಸಂಘದ ಮನವಿಗೆ ಸ್ಪಂದಿಸಿದ್ದು, 131 ಅದಿಕಾರಿ ಸಿಬ್ಬಂದಿಗೆ ಸರ್ಕಾರದಿಂದಲ್ಲೆ ವೇತನ ಇತರೆ ಸೌಲಭ್ಯಗಳನ್ನು ಪಡೆಯಲು ಆರ್ಥಿಕ ಇಲಾಖೆಯವರು ಆದೇಶ ಮಾಡಿದ್ದಾರೆ. ಮುಜರಾಯಿ ಸಚಿವರಾದ ಶ್ರೀ ರಾಮಲಿಂಗಾರೆಡ್ಡಿ ಅವರ ಆಸಕ್ತಿ ಮತ್ತು ಪ್ರಯತ್ನದಿಂದ ಒಂದು ಅತ್ಯಂತ ಮಹತ್ವದ ಆದೇಶ ಹೊರಬಿದ್ದಿದ್ದು ದೇವಾಲಯಗಳ ಕೋಟ್ಯಾಂತರ ರೂಪಾಯಿ ಉಳಿಸಿದ ಕೆಲಸವಾಗಿದೆ ಎಂದು ಅವರು ತಿಳಿಸಿದ್ದಾರೆ.