ಬೆಳಗಾವಿ : ಬಸ್ಸಿನಲ್ಲಿ ತೆರಳುವಾಗ ಟಿಕೆಟ್ ಸಂಬಂಧ ನಡೆದ ಗಲಾಟೆಗೆ ವೇಳೆ ಮರಾಠಿಯಲ್ಲಿ ಮಾತನಾಡುವಂತೆ ಒತ್ತಾಯಿಸಿ ಕಂಡಕ್ಟರಿಗೆ ಥಳಿಸಿದ ಪ್ರಕರಣದ ಆರೋಪಿಗಳು ಇದೀಗ ಹಿಂಡಲಗಾ ಜೈಲುಪಾಲು ಆಗಿದ್ದಾರೆ.
ಈ ಸಂಬಂಧ ಮೂವರನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಮಾರಿಹಾಳ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ನಲ್ಲಿ ಬಾಳೇಕುಂದ್ರಿ ಕೆ.ಎಚ್.ಗ್ರಾಮದಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಕಂಡಕ್ಟರ್ ಜೊತೆ ವ್ಯಕ್ತಿಯೊಬ್ಬ ಮರಾಠಿಯಲ್ಲಿ ಮಾತನಾಡುವಂತೆ ಒತ್ತಾಯಿಸಿದಲ್ಲದೆ ನಂತರ ಜನರನ್ನು ಸೇರಿಸಿ ಹಲ್ಲೆಗೈದಿದ್ದ.