ಅಪರಾಧ ಸುದ್ದಿ

ಕನ್ನಡ ಮಾತನಾಡಿದ ಕಂಡೆಕ್ಟರ್ ನನ್ನು ಥಳಿಸಿದ್ದಲ್ಲದೇ ಈಗ ಅವರ ವಿರುದ್ಧವೇ ಪೋಕ್ಸೋ ಪ್ರಕರಣ ದಾಖಲು

Share It

ಬೆಳಗಾವಿ: ಕನ್ನಡ‌ ಮಾತಾಡು ಎಂದಿದ್ದಕ್ಕೆ ಹಲ್ಲೆಗೊಳಗಾದ ಕಂಡಕ್ಟರ್ ವಿರುದ್ಧ ಪೋಕ್ಸೊ‌ ಕೇಸು ದಾಖಲಾಗಿದೆ.

ಬಸ್ ಕಂಡಕ್ಟರ್ ಮಹಾದೇವ ಹುಕ್ಕೇರಿ ಎಂಬವರ ವಿರುದ್ಧ ಪೋಕ್ಸೋ ಕೇಸು ದಾಖಲಾಗಿದೆ.

ಬೆಳಗಾವಿಯಿಂದ‌ ಸುಳೇಭಾವಿಗೆ ಹೊರಟಿದ್ದ ಬಸ್ ನಲ್ಲಿ ಬಾಳೇಕುದ್ರಿ ಕೆ.ಎಚ್. ಗ್ರಾಮಕ್ಕೆ ಬಾಲಕಿ ಪ್ರಯಾಣಿಸುತ್ತಿದ್ದಳು. ಟಿಕೆಟ್ ಕೇಳಿದಾಗ, ಕನ್ನಡದಲ್ಲಿ ಮಾತನಾಡುವಂತೆ ಕಂಡಕ್ಟರ್ ಹೇಳಿದ್ದು, ಆಗ ಬಾಲಕಿಗೆ ಕನ್ನಡ ಬರುವುದಿಲ್ಲ ಎಂದಾಗ ಮಾತಿನ ಚಕಮಕಿ ನಡೆದಿದೆ. ಬಳಿಕ ಬಾಲಕಿ ಕಡೆಯುವರು ಬಾಳೇಕುದ್ರಿಗೆ ಬಂದಾಗ ಕೆಲ‌ ಯುವಕರು ಸೇರಿ ಹಲ್ಲೆ ಮಾಡಿದ್ದರು.

ಹಲ್ಲೆ ಸಂಬಂಧ ಕಂಡಕ್ಟರ್ ದೂರು ನೀಡಿದ್ದು, ಡಿಸಿಪಿ ನೇತೃತ್ವದಲ್ಲಿ ವಿಚಾರಣೆ ನಡೆದಿತ್ತು. ಇದಕ್ಕೆ ಪ್ರತಿಯಾಗಿ‌ ಕಂಡಕ್ಟರ್ ವಿರುದ್ಧ ಬಾಲಕಿ ಕಡೆಯಿಂದ ಪೋಕ್ಸೋ‌ ಕೇಸು ದಾಖಲಿಸಿದ್ದಾರೆ.


Share It

You cannot copy content of this page