ಅಪರಾಧ ಸುದ್ದಿ

ಪೋಕ್ಸೋ ಕೇಸ್ ಬೋಗಸ್ : ಕಂಡಕ್ಟರ್ ಪರ ನಿಂತ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ

Share It

ಬೆಂಗಳೂರು: ಭಾಷೆಯ ಕಾರಣಕ್ಕೆ ಗಲಾಟೆ ನಡೆಸಿ, ಕಂಡಕ್ಟರ್ ಮೇಲೆ ನೀಡಿರುವ ಫೋಕ್ಸೋ ಕೇಸ್ ವಿಚಾರದಲ್ಲಿ ಯಾವುದೇ ಕಾರಣಕ್ಕೂ ನಮ್ಮ ಸಿಬ್ಬಂದಿ ಬಿಟ್ಟುಕೊಡಲ್ಲ ಎಂದು ತಮ್ಮ ಕಂಡಕ್ಟರ್ ಪರ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ನಿಂತಿದ್ದಾರೆ.

ಕಂಡಕ್ಟರ್ ಮೇಲೆ ಮರಾಠಿ ಮಾತನಾಡುವಂತೆ ಒತ್ತಾಯಿಸಿ, ಪುಂಡರು ಹಲೆಲ ನಡೆಸಿದ್ದರು. ಅವರ ವಿರುದ್ಧ ಪ್ರಕರಣ ದಾಖಲಾಗುತ್ತಿದ್ದಂತೆ ಯುವತಿ ಕಡೆಯಿಂದ ಪೊಕ್ಸೋ ಕೇಸ್ ಕೊಡಿಸಿ, ಪ್ರಕರಣದಿಂದ ತಪ್ಪಿಸಿಕೊಳ್ಳುವ ಪ್ರಯತ್ನ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ತಮ್ಮ ಸಾರಿಗೆ ಸಿಬ್ಬಂದಿ ಪರ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ನಿಂತಿದ್ದಾರೆ.

ಪೊಕ್ಸೋ ದೂರು ಕೊಟ್ಟಿರುವುದು ಏಕೆ ಎಂಬುದು ಎಲ್ಲರಿಗೂ ಗೊತ್ತಾಗುತ್ತದೆ. ಭಾಷೆಯನ್ನು ಅಡ್ಡಯಿಟ್ಟುಕೊಂಡು ನಮ್ಮ ಸಿಬ್ಬಂದಿಗೆ ಹಲ್ಲೆ ಮಾಡಿರುವುದಲ್ಲದೇ, ಅವರ ಮೇಲೆ ಕೇಸ್ ಹಾಕಲು ಹೊರಟಿದ್ದಾರೆ. ಇದು ಸುಳ್ಳು ದೂರು ಎಂಬುದು ಎಲ್ಲರಿಗೂ ಗೊತ್ತು. ಹೀಗಾಗಿ, ನಾನು ನಮ್ಮ ಸಿಬ್ಬಂದಿಯ ಪರ ನಿಲ್ಲುತ್ತೇನೆ ಎಂದಿದ್ದಾರೆ.

ಕಂಡಕ್ಟರ್ ಮೇಲೆ ಹಲ್ಲೆ ನಡೆಸಿದ ಎಂಟು ಜನರನ್ನು ಈಗಾಗಲೇ ನ್ಯಾಯಾಲಯ ಜೈಲಿಗೆ ಕಳುಹಿಸಿದೆ. ಈ ಹಿನ್ನೆಲೆಯಲ್ಲಿ ಪೊಕ್ಸೋ ದೂರು ನೀಡುವ ನಾಟಕ ನಡೆಯುತ್ತಿದೆ. ನಾನು ಈ ಕುರಿತು ಗೃಹ ಸಚಿವರ ಜತೆ ಮಾತನಾಡುತ್ತೇನೆ ಎಂದು ರಾಮಲಿಂಗಾ ರೆಡ್ಡಿ ತಿಳಿಸಿದ್ದಾರೆ.


Share It

You cannot copy content of this page