ಹೊಸದಿಲ್ಲಿ: ಆರ್‌ಬಿಐ ನಿವೃತ್ತ ಗವರ್ನರ್ ಶಕ್ತಿಕಾಂತ್ ದಾಸ್ ಅವರನ್ನು ಪ್ರಧಾನಿ ನರೇಂದ್ರ ಮೋದಿ ಅವರ ಪ್ರಧಾನ ಕಾರ್ಯದರ್ಶಿ-2 ಆಗಿ ನೇಮಕಗೊಳಿಸಿ ಆದೇಶಿಸಲಾಗಿದೆ.
ಸಂಪುಟದ ನೇಮಕ ಸಮಿತಿ ಈ ಕುರಿತು ಆದೇಶ ಮಾಡಿದ್ದು, ಶಕ್ತಿಕಾಂತ್ ದಾಸ್ ಅವರು, ಪ್ರಧಾನಿ ನರೇಂದ್ರ ಮೋದಿ ಅವರ ಅಧಿಕಾರವಧಿಯವರೆಗೆ ಅಥವಾ ಮುಂದಿನ ಆದೇಶದವರೆಗೆ ಈ ಹುದ್ದೆಯಲ್ಲಿ ಮುಂದುವರಿಯಲಿದ್ದಾರೆ.
ದಾಸ್ ಅವರು ಸೆ.11, 2019 ರಿಂದ ಪ್ರಧಾನ ಕಾರ್ಯದರ್ಶಿ ಹುದ್ದೆಯಲ್ಲಿರುವ ಪ್ರಮೋದ್ ಕುಮಾರ್ ಮಿಶ್ರಾ ಅವರ ಜತೆಗೆ ಕಾರ್ಯನಿರ್ವಹಿಸಲಿದ್ದಾರೆ. ಅವರನ್ನು ಜೂನ್ 2024 ರಲ್ಲಿ ಮರುನೇಮಕ ಮಾಡಲಾಗಿತ್ತು. ಇದೀಗ ಅವರ ಜತೆಗೆ ಹೆಚ್ಚುವರಿಯಾಗಿ ಶಕ್ತಿಕಾಂತ್ ದಾಸ್ ಅವರನ್ನು ನೇಮಿಸಲಾಗಿದೆ.