ಬೆಳಗಾವಿ: ಬಸ್ ಕಂಡಕ್ಟರ್ ಮೇಲೆ ಹಲ್ಲೆ ನಡೆದ ಪ್ರಕರಣಕ್ಕೆ ಮೂಲಕಾರಣವಾದ ಮತ್ತು ಕಂಡಕ್ಟರ್ ವಿರುದ್ಧ ಪೋಕ್ಸೋ ಕೇಸು ದಾಖಲಿಸಿ ವಾಪಸ್ ಪಡೆದಿರುವ ಕುಟುಂಬ ವಿವಾದದ ಬಗ್ಗೆ ಪ್ರತಿಕ್ರಿಯಿಸಿದೆ.
“ಪ್ರಕರಣ ವಿನಾಃಕಾರಣ ಎಳೆಯಲ್ಪಡುತ್ತಿದೆ, ಇದು ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳ ನಡುವೆ ಸಂಘರ್ಷವನ್ನು ಸೃಷ್ಟಿಸುತ್ತಿದೆ ಮತ್ತು ಮಗಳ ಭವಿಷ್ಯಕ್ಕೆ ಪ್ರಕರಣ ತೊಡಕಾಗಬಾರದು ಎನ್ನುವ ದೃಷ್ಟಿಯಿಂದ ಕಂಡಕ್ಟರ್ ವಿರುದ್ಧ ದಾಖಲಿಸಿದ್ದ ಪೋಕ್ಸೋ ಕೇಸನ್ನು ಹಿಂಪಡೆಯಲಾಗಿದೆ” ಎಂದು ಬಾಲಕಿಯ ತಾಯಿ ಹೇಳುತ್ತಾರೆ.
“ಕಂಡಕ್ಟರ್ ಮಗಳ ವಿರುದ್ಧ ಅವಾಚ್ಯ ಪದಗಳನ್ನು ಬಳಸಿದ್ದು ನಿಜ, ತಮ್ಮದು ಕನ್ನಡದ ಕುಟುಂಬ, ಮನೇಲಿ ಎಲ್ಲರೂ ಕನ್ನಡ ಮಾತಾಡುತ್ತೇವೆ, ಮಗಳಿಗೆ ಮಾತ್ರ ಕನ್ನಡ ಬರಲ್ಲ” ಎಂದು ಸಂತ್ರಸ್ತೆ ಯುವತಿಯ ತಾಯಿ ಹೇಳಿದ್ದಾರೆ.
ಆದರೆ ಅವರ ಮನೆಯಲ್ಲಿ ಎಲ್ಲರೂ ಕನ್ನಡ ಮಾತಾಡುತ್ತಿದ್ದರೂ ಸಂತ್ರಸ್ತೆ ಯುವತಿಗೆ ಮಾತ್ರ ಹೇಗೆ ಭಾಷೆ ಬರಲ್ಲ? ಅನ್ನೋದು ಯಕ್ಷ ಪ್ರಶ್ನೆಯಾಗಿದೆ.