ಸುಳ್ಳು ಮಾಹಿತಿ ನೀಡಿ ಸೂರ್ಯ ಸಿಟಿ ಅಭಿವೃದ್ಧಿಗೆ ಕೆಲವರು ಅಡ್ಡಿ: ಆರೋಪ
ಆನೇಕಲ್: ಸೂರ್ಯ ನಗರ ಎರಡನೇ ಹಂತದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮನೆಗಳ ನಿರ್ಮಾಣ ಆಗಬೇಕಿದೆ ಆದರೆ ಕೆಲವರು ಸುಳ್ಳು ಮಾಹಿತಿ ನೀಡಿ ಜನರನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದು ಸೂರ್ಯ ನಗರ ಎರಡನೇ ಹಂತದ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ರಾಜಶೇಖರ್ ಹೇಳಿದರು.
ಅವರು ಮಂಗಳವಾರ ಸೂರ್ಯನ ನಗರದಲ್ಲಿ ಮಾತನಾಡಿದರು, ಕರ್ನಾಟಕ ಗೃಹ ಮಂಡಳಿ ವತಿಯಿಂದ 2014ರಲ್ಲಿ ಎರಡನೇ ಹಂತದಲ್ಲಿ ಮೊದಲು ಮನೆ ನಿರ್ಮಾಣ ಪ್ರಾರಂಭ ಆಗಿತ್ತು, 2015 ರಲ್ಲಿ ವಿದ್ಯುತ್ ಸಂಪರ್ಕ ಕಲ್ಪಿಸಿದ್ದರು ಅದಾದ ಬಳಿಕ ಮನೆಗಳ ಸಂಖ್ಯೆ ತೀರಾ ಕಡಿಮೆ ಇತ್ತು ಸೂರ್ಯನಾಗರ ಎರಡನೇ ಹಂತದಲ್ಲಿ ನಿವಾಸಿಗಳು ಸಂಘ ಸ್ಥಾಪನೆ ಮಾಡಿಕೊಂಡು 2018ರಲ್ಲಿ ಹಲವು ಬೇಡಿಕೆಗಳನ್ನು ಕರ್ನಾಟಕ ಗ್ರಹ ಮಂಡಳಿ ಅಧಿಕಾರಿಗಳಿಗೆ ತಿಳಿಸಿದಾಗ ಮೂಲಭೂತ ಸೌಕರ್ಯಗಳಿಗೆ ಸ್ಪಂದಿಸುತ್ತಾ ಬಂದಿದ್ದು ಸದ್ಯ ಸೂರ್ಯ ನಗರ ಎರಡನೇ ಹಂತದಲ್ಲಿ ಮನೆಗಳ ನಿರ್ಮಾಣ ಇನ್ನೂ ಕೂಡ ಆಗಬೇಕಿದೆ ಆದರೆ ಕುಡಿಯುವ ನೀರು ಮೂಲಭೂತ ಸೌಕರ್ಯಗಳಿಗೆ ಸ್ಪಂದಿಸಲು ಅಧಿಕಾರಿಗಳಿಗೆ ಮನವಿ ಮಾಡಿದಾಗ ಅಧಿಕಾರಿಗಳು ಸ್ಪಂದಿಸುತ್ತಾ ಬಂದಿದ್ದಾರೆ, ಇತ್ತೀಚೆಗೆ ಕೆಲವರು ಕರ್ನಾಟಕ ಗ್ರಹ ಮಂಡಳಿಯ ಆದೇಶಗಳನ್ನು ವಿಕ್ಕರಿಸಿ ಒಬ್ಬೊಬ್ಬರು ಬೇರೆ ಬೇರೆ ಬಡಾವಣೆಗಳಲ್ಲಿ ಒಂದೇ ಕುಟುಂಬದವರು ಎರಡರಿಂದ ಮೂರು ನಿವೇಶನಗಳನ್ನು ಪಡೆದಿರುವ ಮಾಹಿತಿಗಳು ಇದ್ದು, ಸರ್ಕಾರ ಇಂತಹ ಮರೆಮಾಚುಯಬರ ವಿರುದ್ಧ ಕ್ರಮ ಕೈಗೊಳ್ಳಬೇಕು ಒಬ್ಬರಿಗೆ ಒಂದೇ ನಿವೇಶನ ಎನ್ನುವ ಆದೇಶ ಕಟ್ಟುನಿಟ್ಟಾಗಿ ಪಾಲನೆ ಆದರೆ ಮನೆಗಳು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ನಿರ್ಮಾಣ ಆಗುತ್ತದೆ ಜೊತೆಗೆ ಇದರ ಸದುಪಯೋಗ ಎಲ್ಲಾ ವರ್ಗದ ಜನರಿಗೆ ಸಿಗಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಇತ್ತೀಚೆಗೆ ಕೆಲವರು ತಪ್ಪು ಮಾಹಿತಿಗಳನ್ನು ನೀಡುತ್ತಿದ್ದಾರೆ, ಸೂರ್ಯ ನಗರ ಎರಡನೇ ಹಂತ 700 ಎಕರೆಗೂ ಹೆಚ್ಚು ಪ್ರದೇಶದಲ್ಲಿ ಇದ್ದು ಇಲ್ಲಿಗೆ ಪ್ರತಿದಿನ ಪೊಲೀಸರುಗಸ್ತು ಬರುತ್ತಾರೆ ನಿವೇಶನಗಳು ಹೆಚ್ಚಿನ ಸಂಖ್ಯೆಯಲ್ಲಿ ಖಾಲಿ ಇರುವುದರಿಂದ ಆಗಾಗ ಹೊರಗಿನಿಂದ ಬೇರೆಯವರು ಬಂದು ಪಾರ್ಟಿಗಳನ್ನು ಮಾಡುತ್ತಾರೆ ಅಧಿಕಾರಿಗಳಿಗೆ ಗೊತ್ತಾದಾಗ ಹಾಗೂ ನಮಗೆ ಗೊತ್ತದಾಗ ಪೊಲೀಸರಿಗೆ ನಾವು ತಿಳಿಸುತ್ತೇವೆ ಉಳಿದಂತೆ 700 ಎಕರೆ ಪ್ರದೇಶದಲ್ಲಿ ಎಲ್ಲೆಲ್ಲಿ ಯಾರು ಬರುತ್ತಾರೆ ಎನ್ನುವುದನ್ನು ತಿಳಿದುಕೊಳ್ಳುವುದು ಕಷ್ಟದ ಕೆಲಸ ಗಳಲ್ಲಿ ಇನ್ನಷ್ಟು ಭದ್ರತೆಗೆ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಮನವಿ ಮಾಡುತ್ತೇವೆ ಎಂದರು.
ಸ್ಥಳಿಯರಾದ ರಾಜಶೇಖರ್ ಮಾತನಾಡಿ, 800 ಎಕರೆ ಪ್ರದೇಶದಲ್ಲಿ ಸಾಕಷ್ಟು ಗಿಡ ಮರಗಳನ್ನು ಬೆಳೆಸಲಾಗಿದೆ ಆದರೆ ಕೆಲವರು ತಮ್ಮ ಮನೆಯ ಬಳಿ ಇರುವ ಮರಗಳನ್ನು ಕಡಿದು ನಾಶ ಮಾಡಿರುವ ಬಗ್ಗೆ ಮಾಹಿತಿ ಇದ್ದು ಸೂರ್ಯ ನಗರ ಬಡಾವಣೆಯ ಎರಡನೇ ಹಂತದ ವ್ಯಕ್ತಿಯಲ್ಲಿ ಸಾಕಷ್ಟು ಮನೆಗಳನ್ನು ನಿರ್ಮಾಣ ಮಾಡಬೇಕಿದ್ದು ಇಲ್ಲಿಗೆ ಬರುವವರಿಗೆ ಹಸಿರು ತಾಣ ಹಾಗೂ ಯಾವುದೇ ಭಯ ಇಲ್ಲದೆ ಜನ ವಾಸಿಸುವ ವಾತಾವರಣ ಇದ್ದು ಕೆಲವರು ಇಲ್ಲ ಸಲದ ಆರೋಪಗಳನ್ನು ಮಾಡಿ ಇಲ್ಲಿಗೆ ಯಾರು ಬರಬಾರದು ಎನ್ನುವ ರೀತಿ ವರ್ತನೆ ಮಾಡುತ್ತಿದ್ದಾರೆ ಈಗಾಗಲೇ ಎರಡನೇ ಹಂತದಲ್ಲಿ ಸಾಕಷ್ಟು ಮನೆಗಳ ನಿರ್ಮಾಣ ಆಗಬೇಕಿದೆ ಸುಳ್ಳು ಮಾಹಿತಿ ನೀಡಿದರೆ ಜನ ಮನೆ ಕಟ್ಟಲು ಇಲ್ಲಿಗೆ ಬರದೇ ಹೋದರೆ ಅಭಿವೃದ್ಧಿಗೆ ಇನ್ನಷ್ಟು ಕುಂಠಿತವಾಗುವ ಸಾಧ್ಯತೆ ಇರುತ್ತದೆ ಎಂದರು.
ಅಸೋಸಿಯೇಷನ್ ವತಿಯಿಂದ ಕೆಲವು ರಸ್ತೆಗಳ ಅಭಿವೃದ್ಧಿ ಮಾಡುವ ನಿಟ್ಟಿನಲ್ಲಿ ಮನವಿ ಬಂದಿದ್ದು ಅದಕ್ಕೆ ಈಗಾಗಲೇ ಟೆಂಡರ್ ಕರೆದಿದ್ದು ರಸ್ತೆ ಗುಂಡಿ ಇರುವ ಕಡೆ ಮುಚ್ಚುವ ಕೆಲಸ ಸದ್ಯದಲ್ಲಿ ಆಗಲಿದೆ, ಕುಡಿಯುವ ನೀರನ್ನು ಜಲ ಮಂಡಳಿಯಿಂದ ಎರಡನೇ ಹಂತದ ಆರನೇ ಬ್ಲಾಕ್ ನಲ್ಲಿ ಶೇಖರಣೆ ಮಾಡಿ ಅಲ್ಲಿಂದ ಮನೆಗಳಿಗೆ ಟ್ಯಾಂಕರ್ ಮೂಲಕ ಸರಬರಾಜು ಮಾಡಲಾಗುತ್ತಿದೆ ಪ್ರತಿ ಮನೆಗಳಿಗೂ ನೀರು ಸರಬರಾಜು ಮಾಡದೆ ಇರಲು ಕಾರಣ 800 ಎಕರೆ ಪ್ರದೇಶದಲ್ಲಿ ಮಾತ್ರ ಮನೆಗಳು ನಿರ್ಮಾಣ ಆಗಿದೆ, ಪೈಪ್ ಮೂಲಕ ನೀರು ಸರಬರಾಜು ಮಾಡಿದರೆ ಖಾಲಿ ಅನಿವೇಶನಗಳು ಹೆಚ್ಚಾಗಿ ಇರುವುದರಿಂದ ನೀರು ಪೋಲಾಗುವ ಸಾಧ್ಯತೆ ಇದ್ದು ಕಾವೇರಿ ನೀರಿನ್ನು ಪೋಲಾಗದಂತೆ ನೋಡಿಕೊಂಡು ಕ್ರಮ ವಹಿಸಲಾಗಿದೆ. ಎರಡನೇ ಹಂತದ ವಾಣಿ ಹಾಗೂ ಅವರ ಸಹೋದರ ಪ್ರವೀಣ್ ಎನ್ನುವರು ವೈಯಕ್ತಿಕ ಕಾರಣಗಳಿಂದ ಬಡಾವಣೆಯ ಬಗ್ಗೆ ಆರೋಪಗಳನ್ನು ಮಾಡುತ್ತಿದ್ದು ಇದು ಸತ್ಯಕ್ಕೆ ದೂರವಾದುದು.
- ಜಗದೀಶ್, ಕಾರ್ಯಪಾಲಕ ಅಭಿಯಂತರರು ಕರ್ನಾಟಕ ಗೃಹ ಮಂಡಳಿ


