ರಾಜಕೀಯ

ರಾಷ್ಟ್ರ ರಾಜಕಾರಣದಲ್ಲಿ ಸುನಾಮಿ ಎಂದು ಕೋಡಿಶ್ರೀ ಭವಿಷ್ಯ: ಹಾಗಾದ್ರೆ ಮೋದಿ ಕತೆಯೇನು?

Share It

ಗದಗ: ರಾಜ್ಯ ರಾಜಕಾರಣದಲ್ಲಿ ಹಾಲುಮತ ಸಮಾಜವನ್ನು ಅಧಿಕಾರದಿಂದ ಬಿಡಿಸಲು ಕಷ್ಟ ಸಾಧ್ಯ ಎಂದು ಭವಿಷ್ಯ ನುಡಿದಿದ್ದ ಕೋಡಿ ಮಠದ ಶ್ರೀಗಳು ಇಂದು ಮತ್ತೊಂದು ಸ್ಫೋಟಕ ಭವಿಷ್ಯವನ್ನು ಬಾಯ್ಬಿಟ್ಟಿದ್ದಾರೆ.

ಗದಗದಲ್ಲಿ ಇಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸುತ್ತಾ ಕೋಡಿ ಮಠದ ಶ್ರೀಗಳು ಹೇಳಿದ್ದಿಷ್ಟು…
“ನೋಡಿ, ನಾನು ಈಗಾಗಲೇ ಹೇಳಿದ್ದೀನಿ, ರಾಜ್ಯದಲ್ಲಿ ಹಾಲುಮತ ಸಮಾಜವನ್ನು ಅಧಿಕಾರದಿಂದ ದೂರ ಇಡಲು ಕಷ್ಟವಾಗುತ್ತದೆ, ಪ್ತಾಚೀನ ಕಾಲದಿಂದ ಅಡವಿಯಲ್ಲಿ ಇದ್ದ ಹಾಲುಮತ ಸಮಾಜದವರು ಕುರಿಗಳನ್ನು ಸಾಕುತ್ತಾ, ಕುರಿಗಳು ಹಾಕುವ ಇಕ್ಕಿಯನ್ನೇ ಲಿಂಗವೆಂದು ಪೂಜೆ ಮಾಡ್ತಾ ಬಂದವರು ಎಂದು.

ಏಕೆಂದರೆ ಹಾಲು ಕೆಟ್ಟರೂ ಹಾಲು ಮತ ಕೆಡುವುದಿಲ್ಲ ಎಂದು ಈಗಾಗಲೇ ಭವಿಷ್ಯ ನುಡಿದಿದ್ದೇನೆ, ಅದರಂತೆ ರಾಜ್ಯದಲ್ಲಿ ಹಾಲುಮತ ಸಮಾಜವನ್ನು ಅಧಿಕಾರದಿಂದ ದೂರ ಇಡಲು ಬಹಳ ಕಷ್ಟವಾಗುತ್ತದೆ, ಅಧಿಕಾರವನ್ನು ಅವರೇ ಬಿಡಬೇಕೆ ಹೊರತು ಹಾಲುಮತ ಸಮಾಜವನ್ನು ಅಧಿಕಾರದಿಂದ ದೂರವಿಡಲು ಕಷ್ಟ ಎಂದು ಭವಿಷ್ಯ ಹೇಳಿದ್ದೆ ಎಂದು ಹೇಳಿದರು.

ಈ ಮೂಲಕ ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಕೆಳಗಿಳಿಸಲು ಕಷ್ಟ, ಆದರೆ ಅವರಾಗಿಯೇ ಅಧಿಕಾರದಿಂದ ಕೆಳಗಿಳಿಯಬೇಕಷ್ಟೇ ಎಂದು ಕೋಡಿ ಶ್ರೀಗಳು ಇಂದೂ ಕೂಡ ಅದೇ ಭವಿಷ್ಯ ನುಡಿದರು.


Share It

You cannot copy content of this page