ಕ್ರೀಡೆ ಸುದ್ದಿ

ಚಾಂಪಿಯನ್ಸ್ ಟ್ರೋಫಿ ಸೆಮಿಫೈನಲ್: ಟಾಸ್ ಗೆದ್ದ ಆಸ್ಟ್ರೇಲಿಯಾದಿಂದ ಬ್ಯಾಟಿಂಗ್ ಆಯ್ಕೆ

Share It

ದುಬೈ, ಮಾ.4: ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ದೇಶದ ರಾಜಧಾನಿ ದುಬೈನ ದುಬೈ ಇಂಟರ್ ನ್ಯಾಶನಲ್ ಸ್ಟೇಡಿಯಂನಲ್ಲಿ ಚಾಂಪಿಯನ್ಸ್ ಕ್ರಿಕೆಟ್ ಟ್ರೋಫಿ-2025 ರ ಮೊದಲ ಸೆಮಿಫೈನಲ್ ಪಂದ್ಯ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಇಂದು ಮಧ್ಯಾಹ್ನ 2:30 ರಿಂದ ಆರಂಭವಾಗಲಿದೆ.
ಇದಕ್ಕೂ ಮುನ್ನ ಮಧ್ಯಾಹ್ನ 2 ಗಂಟೆಗೆ ಟಾಸ್ ಗೆದ್ದ ಆಸ್ಟ್ರೇಲಿಯಾ ತಂಡದ ನಾಯಕ ಸ್ಟೀವನ್ ಸ್ಮಿತ್ ಮೊದಲು ಬ್ಯಾಟಿಂಗ್ ಆಯ್ದುಕೊಂಡರು.
ಹೀಗಾಗಿ ಮೊದಲು ಬೌಲಿಂಗ್ ಪಿಚ್ ನಲ್ಲಿ ಮೊದಲು ಬ್ಯಾಟಿಂಗ್ ನಡೆಸಲು ಆಸ್ಟ್ರೇಲಿಯಾ ಮುಂದಾಗಿದೆ. ಮೊದಲು ಬ್ಯಾಟಿಂಗ್ ನಡೆಸುವ ತಂಡಕ್ಕೆ ಈ ಪಿಚ್ ಸಹಕಾರಿಯಾಗಲಿದೆ. ದುಬೈ ಪಿಚ್ ಸ್ಪಿನ್ನರ್ ಗಳಿಗೆ ಅನುಕೂಲವಾಗಿದೆ. ಈ ಸ್ಟೇಡಿಯಂನಲ್ಲಿ ಸರಾಸರಿ ಸ್ಕೋರ್ ಕೇವಲ 229 ರನ್ ಆಗಿದೆ. ಆದ್ದರಿಂದ ಆಸ್ಟ್ರೇಲಿಯಾ ಟಾಸ್ ಗೆದ್ದು ಉತ್ತಮ ಸ್ಕೋರ್ ಗಳಿಸಿ ಭಾರತಕ್ಕೆ ಚೇಸಿಂಗ್ ಮಾಡಲಾಗದಂತೆ ಬೌಲಿಂಗ್ ಪಿಚ್ ಬಳಸಿಕೊಳ್ಳಲು ಮುಂದಾಗಿದೆ.
ಮೊನ್ನೆ ಅಂತಿಮ ಲೀಗ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಗೆದ್ದ ತಂಡವನ್ನೇ ಟೀಂ ಇಂಡಿಯಾ ಇಂದು ಕಣಕ್ಕಿಳಿಸಿ ಆಡುತ್ತಿದೆ.


Share It

You cannot copy content of this page