ಬೆಂಗಳೂರು: ಹಳ್ಳಿ ಜನರು ಬೆಂಗಳೂರಿನ ಗಾರ್ಮೆಂಟ್ಸ್ ಗಳಲ್ಲಿ ಬಂದು ಕೆಲಸ ಮಾಡುತ್ತಾ ಕಷ್ಟ ಪಡುತ್ತಿದ್ದಾರೆ. ಅದನ್ನು ತಪ್ಪಿಸಲು ಸರಕಾರ ಹೆಚ್ಚು ಹೆಚ್ಚು ಕೊಳವೆ ಬಾವಿ ಕೊರೆಸಿಕೊಡಬೇಕು ಎಂದು ಕೆ.ಎಂ. ಶಿವಲಿಂಗೇಗೌಡ ಒತ್ತಾಯಿಸಿದ್ದಾರೆ.
ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆ ವೇಳೆ ಅವರು ಮಾತನಾಡಿ, ಯುವಕರು ನಿರುದ್ಯೋಗಿಗಳಾಗುವುದನ್ನು ತಪ್ಪಿಸಲು ಕೊಳವೆ ಬಾವಿ ಕೊರೆಸಿ ಕೊಡ್ಬೇಕು. ನಮ್ಮೂರಲ್ ಬಾವಿ ಹಾಕಿಸ್ಕಂಡಿರೋ ಜನ ಹೀರೋ ಹೊಂಡಾ ಮ್ಯಾಲೆ ತರ್ಕಾರಿ ತಂದು ಮಾರ್ಕೆಟ್ ನಲ್ಲಿ ಮಾರಾಟ ಮಾಡ್ತಾರೆ ಎಂದರು.
ಕೊಳವೆ ಬಾವಿ ಇಲ್ದೆ ಹೋದ್ರೆ ಬೆಂಗ್ಲೂರಲ್ಲಿ ಬಂದು ಗಾರ್ಮೆಂಟ್ ಕೆಲ್ಸ ಮಾಡಬೇಕು. ಅದ್ಕೆ ಜಾಸ್ತಿ ಬಾವಿ ಕೊಡಿ, ಆಗ ಯುವುಕ್ರು ಎಲ್ಲ ತಮ್ಮ ಜಮೀನಲ್ಲೆ ದುಡ್ಕಂಡ್ ಬದೀಕತ್ತಾರೆ ಎಂದು ಶಿವಲಿಂಗೇಗೌಡ ತಿಳಿಸಿದರು.