ಅಪರಾಧ ಸುದ್ದಿ

ಹುಬ್ಬಳ್ಳಿ ಗಲಭೆ ಕೇಸ್ ಹಿಂಪಡೆಯುವ ರಾಜ್ಯಸರ್ಕಾರದ ತೀರ್ಮಾನದ ವಿರುದ್ಧ ರಿಟ್ ಸಲ್ಲಿಕೆ!

Share It

ಹುಬ್ಬಳ್ಳಿ ಗಲಭೆ ಕೇಸ್ ವಾಪಸ್ ಪಡೆಯಲು ರಾಜ್ಯಸರ್ಕಾರದ ತೀರ್ಮಾನಿಸಿತ್ತು. ಇದು ರಾಜ್ಯ ರಾಜಕೀಯದಲ್ಲಿ ಸಾಕಷ್ಟು ಸಂಚಲನ ಮೂಡಿಸಿತ್ತು. ಈ ವಿಚಾರ ಸಾಕಷ್ಟು ಆರೋಪ ಪ್ರತ್ಯಾರೋಪಗಳಿಗೂ ಕಾರಣವಾಗಿತ್ತು.

ಈ ಮಧ್ಯೆ ಹಳೇ ಹುಬ್ಬಳ್ಳಿ ಕೇಸ್ ಹಿಂಪಡೆಯುವ ತೀರ್ಮಾನ ಪ್ರಶ್ನಿಸಿ ಯುವ ವಕೀಲರ ತಂಡ ಹೈಕೋರ್ಟ್​​ನಲ್ಲಿ ರಿಟ್ ಅರ್ಜಿ ಸಲ್ಲಿಸಿದೆ. ಈ ಮೂಲಕ ರಾಜ್ಯದ ಬಿಜೆಪಿ ಸರ್ಕಾರದ ವಿರುದ್ಧ ತೊಡೆತಟ್ಟಿದ್ದಾರೆ. ಈ ಕುರಿತು ಕಾರಣ ಕೇಳಿ ರಾಜ್ಯಸರ್ಕಾರಕ್ಕೆ ಹೈಕೋರ್ಟ್ ನೋಟಿಸ್ ನೀಡಿದೆ.

ಗಿರೀಶ್ ಭಾರದ್ವಾಜ್ ಮತ್ತು ಶ್ರೀಧರ್ ಎನ್ನುವವರಿಂದ ಫೆ 16 ರಂದು ರಿಟ್ ಅರ್ಜಿ ಸಲ್ಲಿಸಿದ್ದರು. ವೆಂಕಟೇಶ ದಳವಾಯಿ ಸರ್ಕಾರದ ವಿರುದ್ಧ ಹೈಕೋರ್ಟ್​​ನಲ್ಲಿ ವಾದ ಮಂಡಿಸಲಿದ್ದಾರೆ. ಹೈಕೋರ್ಟ್​ನಲ್ಲಿ ಮಾರ್ಚ್ 17 ರಂದು ರೀಟ್ ಅರ್ಜಿ ವಿಚಾರಣೆ ನಡೆಸಲಿದೆ. ಹುಬ್ಬಳ್ಳಿ ಸಂಜೀವ್ ಬಡಾಸ್ಕರ ಮತ್ತು ಅಶೋಕ್ ಅಣ್ವೇಕರ್ ತಂಡದಿಂದ ಬೆಂಗಳೂರು ವಕೀಲರಿಗೆ ಸಾಥ್ ನೀಡಲಾಗಿದೆ.


Share It

You cannot copy content of this page