ಚಾಂಪಿಯನ್ಸ್ ಕ್ರಿಕೆಟ್ ಟ್ರೋಫಿ-2025 ರ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿ ನಿಗದಿತ 50 ಓವರುಗಳಲ್ಲಿ 7 ವಿಕೆಟ್ ನಷ್ಟಕ್ಕೆ 251 ರನ್ ಗಳಿಸಿದೆ.
ಯುಎಇ ದೇಶದ ದುಬೈ ಇಂಟರ್ ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಈ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದ ಕಿವೀಸ್ ನಾಯಕ ಮೈಕಲ್ ಸ್ಯಾಂಟ್ನರ್ ಮೊದಲು ಬ್ಯಾಟಿಂಗ್ ಆಯ್ದುಕೊಂಡರು. ಅದರಂತೆ ಆರಂಭದಲ್ಲೇ ಬೀಡುಬೀಸಾಗಿ ಬ್ಯಾಟ್ ಮಾಡಿದ ಓಪನರ್ ಗಳಾದ ರಚಿನ್ ರವೀಂದ್ರ ಮತ್ತು ವಿಲ್ ಯಂಗ್ ಮೊದಲ ವಿಕೆಟ್ ಗೆ 7.5 ಓವರುಗಳಲ್ಲಿ 57 ರನ್ ಸೇರಿಸಿದರು. ಆದರೆ ಲೆಗ್ ಸ್ಪಿನ್ನರ್ ವರುಣ್ ಚಕ್ರವರ್ತಿ ಯಂಗ್ ವಿಕೆಟ್ ಕಿತ್ತರು. ನಂತರ ಕುಲದೀಪ್ ಯಾದವ್ ಸಹ ಸ್ಪಿನ್ ಬೌಲಿಂಗ್ ಮಾಡಿ ರಚಿನ್ ರವೀಂದ್ರ ಮತ್ತು ಕೇನ್ ವಿಲಿಯಮ್ಸ್ ಅವರ ವಿಕೆಟ್ ಕಿತ್ತರು. ಆದರೆ ಟಾಮ್ ಲ್ಯಾಥಮ್ ಮತ್ತು ಡೆರ್ರಿ ಮಿಚೆಲ್ ವಿಕೆಟ್ ಮೇಲೆ ಕಚ್ಚಿಕೊಂಡರು.
ಇಷ್ಟಾದರೂ ರವೀಂದ್ರ ಜಡೇಜಾ ಸ್ಕೋರ್ 108 ರನ್ ಆದಾಗ 4ನೇ ವಿಕೆಟ್ ರೂಪದಲ್ಲಿ ಲ್ಯಾಥಮ್ ವಿಕೆಟ್ ಪಡೆದರು. ಆಗ ಕಿವೀಸ್ ಕುಗ್ಗಿ ಹೋಯಿತು. ಆದರೆ ಡೆರ್ರಿ ಮಿಚೆಲ್ ಮತ್ತು ಗ್ಲೆನ್ ಫಿಲಿಪ್ಸ್ ಮಾತ್ರ ನಿಧಾನವಾಗಿ ಬ್ಯಾಟ್ ಮಾಡಿ ಸ್ಕೋರ್ ಅನ್ನು 165 ರನ್ ವರೆಗೆ ಒಯ್ದರು. ಆಗ ಫಿಲಿಪ್ಸ್ ಔಟಾದರು. ನಂತರ ಮಿಚೆಲ್ ವರುಣ್ ಚಕ್ರವರ್ತಿ ಬೌಲಿಂಗ್ ನಲ್ಲಿ 34 ರನ್ ಗಳಿಸಿ ಔಟಾದರು. ಆಗ ಸ್ಕೋರ್ 211/6 ರನ್. ಆದರೆ ಕುಸಿಯುತ್ತಿದ್ದ ಕಿವೀಸ್ ತಂಡಕ್ಕೆ ಮಿಚೆಲ್ ಮತ್ತು ಮೈಕಲ್ ಬ್ರಾಸ್ ವೆಲ್ ತಡೆದು ನಿಂತು ವೇಗವಾಗಿ ಬ್ಯಾಟ್ ಮಾಡಿದರು.
ಬಳಿಕ ನಾಯಕ ಸ್ಯಾಂಟ್ನರ್ ಮತ್ತು ಬ್ರಾಸ್ವೆಲ್ ಸ್ಕೋರ್ ಅನ್ನು 239 ರನ್ ವರೆಗೆ ಒಯ್ದಾಗ ಸ್ಯಾಂಟ್ನರ್ ಔಟಾದರು. ಕೊನೆಗೆ ಅಜೇಯ ಅರ್ಧಶತಕ ಗಳಿಸಿದ ಮೈಕಲ್ ಸ್ಯಾಂಟ್ನರ್ 51 ರನ್ ಬಾರಿಸಿ ನ್ಯೂಜಿಲೆಂಡ್ 50 ಓವರುಗಳಲ್ಲಿ 7 ವಿಕೆಟ್ ನಷ್ಟಕ್ಕೆ 251 ರನ್ ಗಳ ಸ್ಪರ್ಧಾತ್ಮಕ ಮೊತ್ತ ದಾಖಲಿಸಲು ನೆರವಾದರು.