ಬೆಂಗಳೂರು: ಪುಣ್ಯಕ್ಷೇತ್ರಗಳಲ್ಲಿ ಭಕ್ತರು ನದಿ ಮಲಿನಗೊಳಿಸುವುದನ್ನು ತಡೆಯಲು ಕರ್ನಾಟಕ ಸರಕಾರ ಮುಂದಾಗಿದ್ದು, ಮಹತ್ವದ ಆದೇಶವೊಂದನ್ನು ಹೊರಡಿಸಿದೆ.
ಇನ್ನು ಮುಂದೆ ಪುಣ್ಯಕ್ಷೇತ್ರಗಳ ನದಿ ದಂಡೆಯ ಮೇಲೆ ಸೋಪು, ಶಾಂಪೂ ಮಾರಾಟವನ್ನು ನಿಷೇಧಿಸುವಂತೆ ಅರಣ್ಯ ಇಲಾಖೆ ಆದೇಶ ಹೊರಡಿಸಿದೆ. ಈ ಕುರಿತು ಮಾಹಿತಿ ನೀಡಿರುವ ಅರಣ್ಯ ಇಲಾಖೆ ಸಚಿವ ಈಶ್ವರ್ ಖಂಡ್ರೆ, ನದಿ ದಂಡೆಯಲ್ಲಿ ಯಾವುದೇ ಕಾರಣಕ್ಕೂ ಸೋಪು ಮತ್ತು ಶಾಂಪೂ ಮಾರಾಟ ಮಾಡುವಂತಿಲ್ಲ ಎಂದು ತಿಳಿಸಿದ್ದಾರೆ.
ಪುಣ್ಯಕ್ಷೇತ್ರಗಳ ವ್ಯಾಪ್ತಿಯ ನದಿ ನೀರಿನಲ್ಲಿ ಸೋಪು ಮತ್ತು ಶಾಂಪುವಿನ ನೊರೆ ಹೆಚ್ಚಾಗಿ ಕಂಡುಬAದಿದ್ದು, ಈಗಲೇ ನಿಯಂತ್ರಣ ಮಾಡದಿದ್ದರೆ, ಮುಂದೆ ನೀರು ಕಲುಷಿತಗೊಳ್ಳುವ ಅಪಾಯವಿದೆ. ಈ ಹಿನ್ನೆಲೆಯಲ್ಲಿ ಸರಕಾರ ಮಹತ್ವದ ತೀರ್ಮಾನ ತೆಗೆದುಕೊಂಡಿದೆ ಎಂದು ಖಂಡ್ರೆ ಹೇಳಿದ್ದಾರೆ.
ನದಿ ದಂಡೆಗಳಲ್ಲಿ ಸೋಪು, ಶಾಂಪೂ ಮಾರಾಟಕ್ಕೆ ನಿಷೇಧ ಹಾಕುವ ಜತೆತೆ ಹೊರಗಿನಿಂದ ತಂದು ಬಳಕೆ ಮಾಡದಂತೆಯೂ ಭಕ್ತರಿಗೆ ಎಚ್ಚರಿಕೆ ನೀಡಲಾಗುತ್ತದೆ. ಜತೆಗೆ, ಭಕ್ತರು ತಮ್ಮ ವಸ್ತುಗಳನ್ನು ನದಿಯಲ್ಲಿ ವಿಸರ್ಜನೆ ಮಾಡದಂತೆ ಕೂಡ ಆದೇಶ ಮಾಡಲಾಗಿದೆ. ಆದೇಶ ಉಲ್ಲಂಘಟನೆ ಮಾಡಿದರೆ, ದಂಡ ವಿಧಿಸುವ ಕುರಿತು ಚರ್ಚೆ ನಡೆಯುತ್ತಿದೆ.