ಸಿನಿಮಾ ಸುದ್ದಿ

ತಾಯಿ ಮಗನ ಸಂಬಂಧ ಸಣ್ಣ ವಿಚಾರಕ್ಕೆ ಹಾಳಾಗುತ್ತಾ?: ಸುಮಲತಾ ಪ್ರಶ್ನೆ

Share It

ಬೆಂಗಳೂರು: ದರ್ಶನ್ InstaGramನಲ್ಲಿ ಅನ್ ಫಾಲೋ ಮಾಡಿದ್ದು ಮತ್ತು ಸುಮಲತಾ ಸ್ಟೇಟಸ್‌ಕುರಿತ ವೈರಲ್ ಸುದ್ದಿಗೆ ಸಂಬಂಧಿಸಿ ಮೌನ ಮುರಿದಿರುವ ಸುಮಲತಾ ಅಂಬರೀಶ್, ತಾಯಿ ಮಗನ ಸಂಬಂಧ ಇಷ್ಟಕ್ಕೆ ಮುಗಿಯುತ್ತಾ? ಎಂದು ಪ್ರಶ್ನೆ ಮಾಡಿದ್ದಾರೆ.

ನಾನು ಎಲ್ಲ ವಿಷಯಗಳಲ್ಲಿ ದರ್ಶನ್ ನನ್ನು ಫಾಲೋ ಮಾಡ್ತೇನೆ. ಕೇಲವ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಫಾಲೋ ಮಾಡಲಿಲ್ಲ ಎಂದ ಮಾತ್ರಕ್ಕೆ ಎಲ್ಲವೂ ಮುಗಿಯಿತು ಎಂದಲ್ಲ, ಇಂತಹ ಸಣ್ಣ ವಿಚಾರಗಳಿಗೆ ತಾಯಿ-ಮಗನ ಸಂಬಂಧ ಮುರಿದುಬೀಳುತ್ತಾ ಎಂದು ಪ್ರಶ್ನೆ ಮಾಡಿದ್ದಾರೆ.

ದರ್ಶನ್ ನನ್ನನ್ನು ಮಾತ್ರವಲ್ಲ ಅವರ ಮಗನನ್ನೂ ಅನ್‌ಫಾಲೋ ಮಾಡಿದ್ದಾರೆ. ನಾನು ಸಾಮಾಜಿಕ ಜಾಲತಾಣಕ್ಕೆ ಅಷ್ಟೊಂದು ಪ್ರಾಮುಖ್ಯತೆ ಕೊಡುವುದಿಲ್ಲ. ಇದು ಸಿಲ್ಲಿ ವಿಚಾರ, ಇದನ್ನು ಇಷ್ಟೊಂದು ದೊಡ್ಡದು ಮಾಡುವ ಅವಶ್ಯಕತೆ ಇಲ್ಲ ಎಂದು ಗುಡುಗಿದ್ದಾರೆ.


Share It

You cannot copy content of this page