ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮ್ಯಾರೀಷನ್ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ. ಮೋದಿ ಅವರು, ಈ ಗೌರವಕ್ಕೆ ಪಾತ್ರರಾದ ಮೊದಲ ಪ್ರಧಾನಿ ಎನಿಸಿಕೊಂಡಿದ್ದಾರೆ.
ಗ್ರಾö್ಯಂಡ್ ಕಮಾಂಡರ್ ಆಫ್ ಆನರ್ ಹೆಸರಿನ ಅತ್ಯುನ್ನತ ನಾಗರಿಕ ಗೌರವ ಇದಾಗಿದ್ದು, ಮ್ಯಾರೀಷಸ್‌ನ ಪೋರ್ಟ್ ಲೂಯಿ ನಗರದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಮ್ಯಾರೀಷಸ್ ಪ್ರಧಾನಿ ನವೀನ್ ರಾಮ್ ಗೂಲಮ್ ಅವರಿಂದ ಪ್ರಶಸ್ತಿ ಪ್ರದಾನ ನಡೆಯಲಿದೆ.
ಭಾರತ ಮತ್ತು ಮ್ಯಾರೀಷಸ್ ನಡುವಿನ ವ್ಯಾಪಾರ, ವಾಣಿಜ್ಯ ಮತ್ತು ರಾಜತಾಂತ್ರಿಕ ಬಾಂಧವ್ಯದ ವೃದ್ಧಿಗೆ ಸಲ್ಲಿಸಿದೆ ಸೇವೆಗೆ ಸಂಬಂಧಿಸಿದಂತೆ ಮೋದಿ ಅವರಿಗೆ ಈ ಗೌರವ ಪ್ರದಾನ ಮಾಡಲಾಗುತ್ತದೆ ಎಂದು ಹೇಳಲಾಗಿದೆ.