ಕರಾಚಿ: ಪಾಕಿಸ್ತಾನದ ಬಲೂಚಿಸ್ತಾನದಲ್ಲಿ ರೈಲನ್ನು ಅಪಹರಿಸಿದ ಬಲೂಚ್ ಲಿಬರೇಷನ್ ಆರ್ಮಿ ದಾಳಿಕೋರರು ರೈಲನ್ನು ಸ್ಫೋಟಿಸಿದ್ದಾರೆ ಎಂದು ವರದಿಯಾಗಿದೆ.
ಟೈಮ್ಸ್ ಇಂಡಿಯಾದ ವರದಿಯ ಪ್ರಕಾರ 400ಕ್ಕೂ ಹೆಚ್ಚು ಪ್ರಯಾಣಿಕರಿದ್ದ ಜಾಫರ್ ಎಕ್ಸ್ಪ್ರೆಸ್ ರೈಲನ್ನು ಉಗ್ರರು ಸ್ಫೋಟ ಮಾಡಿದ್ದಾರೆ. ಜತೆಗೆ ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ.
100 ಕಿ.ಮೀ ವ್ಯಾಪ್ತಿಯಲ್ಲಿರುವ ಬೆಟ್ಟಗುಡ್ಡಗಳ ಕಣಿವೆ ಪ್ರದೇಶದವಾದ ಬೋಲಾನ್ ವ್ಯಾಪ್ತಿಯಲ್ಲಿ 17 ಸುರಂಗಗಳಿವೆ. ಹೀಗಾಗಿ, ಈ ಭಾಗದಲ್ಲಿ ರೈಲು ನಿಧಾನವಾಗಿ ಚಲಿಸುತ್ತದೆ. ಇದನ್ನು ಬಳಸಿಕೊಂಡು ಉಗ್ರರು ರೈಲು ಹೈಜಾಕ್ ಮಾಡಿದ್ದಾರೆ ಎಂದು ವರದಿಯಾಗಿದೆ.
ಈ ನಡುವೆ ಪಾಕಿಸ್ತಾನದ ಭದ್ರತಾ ಪಡೆಗಳು 27 ಉಗ್ರರನ್ನು ಕೊಂಚು 155 ಪ್ರಯಾಣಿಕರನ್ನು ರೈಲಿನಿಂದ ರಕ್ಷಣೆ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಈ ಕಾರ್ಯಾಚರಣೆಯಲ್ಲಿ 37 ಪ್ರಯಾಣೀಕರು ಗಾಯಗೊಂಡಿದ್ದು, ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.