ಬೆಂಗಳೂರು: ಬಸ್, ಮೆಟ್ರೋ ಏರಿಕೆ ಬೆನ್ನಲ್ಲೇ ರಾಜಧಾನಿ ಬೆಂಗಳೂರಿನ ಜನರಿಗೆ ಮತ್ತೊಂದು ದರ ಏರಿಕೆಯ ಬಿಸಿ ತಟ್ಟಿಲಿದೆ.
ಅದೇನೆಂದರೆ ಬೆಂಗಳೂರಿನ ಆಟೋ ಮೀಟರ್ ದರ ಏರಿಕೆ ಇನ್ನೊಂದು ವಾರದಲ್ಲಿ ಜಾರಿಗೆ ಬರಲಿದೆ. ಏಕೆಂದರೆ ಇಂದು ಆಟೋ ದರ ಏರಿಕೆ ಬಗ್ಗೆ ಮಹತ್ವದ ಸಭೆ ನಡೆಯಲಿದೆ.
ಆಟೋದ ಕನಿಷ್ಠ ದರವನ್ನು 30 ರೂಪಾಯಿಯಿಂದ 40 ರೂಪಾಯಿಗೆ
ಹೆಚ್ಚಿಸಬೇಕೆಂದು ಆಟೋ ಚಾಲಕರು ಒತ್ತಾಯಿಸುತ್ತಿದ್ದಾರೆ. ಪ್ರತಿ ಕಿಲೋಮೀಟರಿಗೆ 15 ರೂಪಾಯಿ ದರವನ್ನು 20 ರೂಪಾಯಿಗೆ ಹೆಚ್ಚಿಸಬೇಕೆಂಬ ಬೇಡಿಕೆಯನ್ನೂ ಮುಂದಿಟ್ಟಿದ್ದಾರೆ.
ಈ ಹಿನ್ನೆಲೆಯಲ್ಲಿ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಕಚೇರಿಯಲ್ಲಿ ಸಭೆ ವಿವಿಧ ಆಟೋ ಚಾಲಕರ ಸಂಘಟನೆಗಳು ಈ ಸಭೆಯಲ್ಲಿ ಭಾಗವಹಿಸಿ, ಸದ್ಯದ ಸಮಸ್ಯೆ ಪಟ್ಟಿ ನೀಡಿದ್ದಾರೆ.
ಜನವರಿಯಲ್ಲಿ ಕೆಎಸ್ಆರ್ಟಿಸಿ-, ಬಿಎಂಟಿಸಿ ಬಸ್‌ಗಳ ದರವೂ ಏರಿಕೆ ಫೆಬ್ರವರಿಯಲ್ಲಿ ನಮ್ಮ ಮೆಟ್ರೋ ದರವೂ ಭಾರಿ ಹೆಚ್ಚಳವಾಗಿತ್ತು. ಸದ್ಯ ಮಾರ್ಚ್ ನಲ್ಲಿ ಆಟೋ ಮೀಟರ್ ದರ ಏರಿಕೆ ಸಾಧ್ಯತೆ ಇದೆ.
ಬಹಳ ದಿನದಿಂದ ಆಟೋ ಚಾಲಕರು ಬೇಡಿಕೆ ಮಂಡಿಸುತ್ತಿದ್ದರು ಕಳೆದ 3 ತಿಂಗಳಿನಿಂದ ನಿಗದಿಯಾಗಿದ್ದ ಸಭೆ ಮುಂದೂಡಲಾಗಿತ್ತು ಆದರೆ ಈಗ ವಿಸ್ತುತ ಚರ್ಚೆ ನಡೆದಿದ್ದು ದರ ಏರಿಕೆ ನಿಶ್ಚಿತ ಎಂದು ಮೂಲಗಳು ತಿಳಿಸಿವೆ.
ಈ ನಡುವೆ ರಸ್ತೆ ಹಾಳಾಗಿರುವುದು,ಅರ್ಧಕ್ಕೆ ನಿಂತ ಕಾಮಗಾರಿಗಳು, ಪೊಲೀಸರ ಕಿರುಕುಳ ಸೇರಿದಂತೆ ಹಲವು ಸಮಸ್ಯೆಯನ್ನು ಸಾರಿಗೆ ಅಧಿಕಾರಿಗಳ ಮುಂದೆ ಹೇಳಿಕೊಂಡಿದ್ದಾರೆ. ವಾದದ ನಂತರ ಪ್ರತಿ ಕಿ.ಮೀಗೆ 77 ರೂ.ನಿದ 10 ರೂ ಹೆಚ್ಚಳ ಸಾಧ್ಯತೆ ಇದ್ದು ಕನಿಷ್ಠ, ದರ 45 ರೂ ಗೆ ನಿಗದಿಯಾಗುವ ಸಾಧ್ಯತೆ ಇದೆ.