ಉಪಯುಕ್ತ ಸುದ್ದಿ

ಈಜೀಪುರ ಮೇಲ್ಸೇತುವೆ ಕಾಮಗಾರಿಗೆ ಪ್ರತ್ಯೇಕ ಎಂಜಿನಿಯರ್ ತಂಡ ರಚನೆ: ಸಚಿವ ರಾಮಲಿಂಗ ರೆಡ್ಡಿ ಸೂಚನೆಯಂತೆ ಆದೇಶ

Share It

ಬೆಂಗಳೂರು: ಸಾರಿಗೆ ಮತ್ತು ಮುಜರಾಯಿ ಇಲಾಖೆ ಸಚಿವ ರಾಮಲಿಂಗಾ ರೆಡ್ಡಿ ಅವರು
ಕೋರಮಂಗಲದ ಈಜಿಪುರ ಮೇಲ್ಸೇತುವೆ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಿ ಸಾರ್ವಜನಿಕರ ಸೇವೆಗೆ ಅನುವು ಮಾಡಲು ಪ್ರತ್ಯೇಕ ಅಭಿಯಂತರರ ತಂಡ ರಚಿಸಲು ಸೂಚಿಸಿದ ಹಿನ್ನೆಲೆಯಲ್ಲಿ ಬಿಬಿಎಂಪಿ ಮುಖ್ಯ ಆಯುಕ್ತರು ಪ್ರತ್ಯೇಕ ತಂಡ ರಚಿಸಿ ಆದೇಶ ಮಾಡಿದ್ದಾರೆ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಕೋರಮಂಗಲದ “ಈಜಿಪುರ ಮೇಲ್ವೇತುವ ಯೋಜನೆ’ ಕಾಮಗಾರಿಯನ್ನು ಪ್ರಸ್ತುತ ಯೋಜನೆ-ಕೇಂದ್ರ ವಿಭಾಗದಿಂದ ನಿರ್ವಹಿಸಲಾಗುತ್ತಿರುತ್ತದೆ. ಈಜಿಪುರ ಮೇಲ್ಸೇತುವೆ ಕಾಮಗಾರಿ ಯೋಜನೆಯನ್ನು ಸಾರ್ವಜನಿಕರ ಹಿತದೃಷ್ಟಿಯಿಂದ ಶೀಘ್ರವಾಗಿ ಪೂರ್ಣಗೊಳಿಸಿ ಅನುಷ್ಠಾನಗೊಳಿಸಬೇಕೆಂದು ಸಾರಿಗೆ ಸಚಿವರು ಸೂಚನೆ ನೀಡಿದ ಹಿನ್ನೆಲೆಯಲ್ಲಿ ಬಿಬಿಎಂಪಿ ಮುಖ್ಯ ಆಯುಕ್ತರು, ಇನ್ನು ಮುಂದೆ ಕೇಂದ್ರ ಕಛೇರಿಯ ಗುಣನಿಯಂತ್ರಣ / ಗುಣಭರವಸೆ ವಿಭಾಗದಿಂದ “ಈಜಿಪುರ ಮೇಲೇತುವೆ ಯೋಜನೆ ಕಾಮಗಾರಿ ಅನುಷ್ಠಾನಗೊಳಿಸಲು ಆದೇಶ ಹೊರಡಿಸಿದ್ದಾರೆ.

ಈ ಕೆಳಕಂಡ ಅಭಿಯಂತರರುಗಳನ್ನು “ಈಜಿಪುರ ಮೇಲೇತುವೆ ಯೋಜನೆ” ಕಾಮಗಾರಿ ಪೂರ್ಣಗೊಳ್ಳುವವರೆಗೆ ಡಾ. ರಾಘವೇಂದ್ರ ಪ್ರಸಾದ್ ಬಿ. ಜಿ ಮುಖ್ಯ ಅಭಿಯಂತರರು (ಗುಣನಿಯಂತ್ರಣ / ಗುಣಭರವಸೆ) ರವರ ಅಧೀನದಲ್ಲಿ ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸಲು ನೇಮಿಸಿ ಆದೇಶಿಸಲಾಗಿದೆ.

ಎನ್. ಚಂದ್ರಶೇಖರ್ ಕಾರ್ಯಪಾಲಕ ಅಭಿಯಂತರರು- ಕಾರ್ಯಪಾಲಕ ಅಭಿಯಂತರರು (ಯೋಜನೆ-ಕೇಂದ್ರ/1), ಸಂದೇಶ್ ಶೆಟ್ಟಿ.
ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು- ಮುಖ್ಯ ಅಭಿಯಂತರರು (ಟಿ.ವಿ.ಸಿ.ಸಿ) ಕಛೇರಿ, ರಂಜಿತ್ ಜೆ. ಎಲ್ ಸಹಾಯಕ ಅಭಿಯಂತರರು- ಕಾರ್ಯಪಾಲಕ ಅಭಿಯಂತರರು (ಯೋಜನೆ-ಕೇಂದ/9) ಇವರು ಮುಖ್ಯ ಅಭಿಯಂತರರು (ಗುಣನಿಯಂತ್ರಣ / ಗುಣಭರವಸೆ) ರವರ ಬಳಿ ಹಾಜರಾತಿ ಸಲ್ಲಿಸಿ, ‘ಈಜಿಪುರ ಮೇಲ್ವೇತುವೆ ಯೋಜನೆ” ಕಾಮಗಾರಿಯನ್ನು ತ್ವರಿತವಾಗಿ ಅನುಷ್ಠಾನಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ.


Share It

You cannot copy content of this page