ರಾಜಕೀಯ ಸುದ್ದಿ

ಲಿಂಗಾಯತ ಸಮಾವೇಶ ಮಾಡೇ ಮಾಡ್ತಿವಿ: ರೇಣುಕಾಚಾರ್ಯ ಸ್ಪಷ್ಟನೆ

Share It

ದಾವಣಗೆರೆ : ಬಿಜೆಪಿ ಹೈಕಮಾಂಡ್ ವಾರ್ನಿಂಗ್ ಮಾಡಿದರೂ ನಾವು ರಾಜ್ಯದಲ್ಲಿ ಲಿಂಗಾಯತ ಸಮಾವೇಶ ಮಾಡೇ ಮಾಡ್ತಿವಿ ಎಂದು ಮಾಜಿ ಸಚಿವ ಎಂ.ಪಿ ರೇಣುಕಾಚಾರ್ಯ ಸ್ಪಷ್ಟಪಡಿಸಿದ್ದಾರೆ.

ದಾವಣಗೆರೆಯಲ್ಲಿ ಇಂದು ಮಾತನಾಡಿದ ಅವರು, ನಾವು ರಾಜ್ಯದಲ್ಲಿ ಲಿಂಗಾಯತ ಸಮಾವೇಶ ಮಾಡೇ ಮಾಡ್ತಿವಿ, ಆದರೆ ಈ ಸಮಾವೇಶಕ್ಕೂ ಬಿಜೆಪಿಗೂ ಯಾವುದೇ ಸಂಬಂಧವಿಲ್ಲ, ಜೊತೆಗೆ ಯತ್ನಾಳ್ ಮತ್ತು ವಿಜಯೇಂದ್ರ ಬಣ ಗುದ್ದಾಟಕ್ಕೂ ಈ ಲಿಂಗಾಯತ ಸಮಾವೇಶಕ್ಕೂ ಯಾವುದೇ ಸಂಬಂಧ ಕಲ್ಪಿಸಬೇಡಿ, ಈ ಸಮಾವೇಶ ಬಿಜೆಪಿಯಲ್ಲಿನ ಲಿಂಗಾಯತ ಸಮುದಾಯದವರನ್ನು ಒಗ್ಗೂಡಿಸಲು ನಡೆಸಲಾಗುತ್ತಿದೆ ಎಂದು ಸಂದೇಶ ರವಾನಿಸಿದರು.


Share It

You cannot copy content of this page