ನೇರ ಸಂದರ್ಶನದ ಮೂಲಕ ಹುದ್ದೆಗೆ ಆಯ್ಕೆ. ನಿವೃತ್ತ ಸರ್ಕಾರಿ ನೌಕರರಿಗೆ ಅವಕಾಶ
ರಾಜ್ಯದ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ಒಪ್ಪಂದದ ಮೇರೆಗೆ ಕೆಲವು ಹುದ್ದೆಗೆ ಅರ್ಜಿಯನ್ನು ಕರೆದಿದೆ. ಅದರಲ್ಲೂ ಮುಖ್ಯವಾಗಿ ರಾಜಸ್ವ ವಿಷಯಗಳ ಸಲಹೆಗಾರ ಹುದ್ದೆಗೆ ನೇಮಕಾತಿಯನ್ನು ಮಾಡಿಕೊಳ್ಳಲಿದೆ. ನೇರ ಸಂದರ್ಶನವನ್ನು ನಡೆಸುವ ಮುಖೇನ ಅಭ್ಯರ್ಥಿಯನ್ನು ಆಯ್ಕೆ ಮಾಡಲಾಗುವುದು. ಅಷ್ಟಕ್ಕೂ ಅಭ್ಯರ್ಥಿಗೆ ಇರಬೇಕಾದ ಅರ್ಹತೆ ಏನು ಎಂಬುದನ್ನು ಈ ಕೆಳಗಿನಂತೆ ನೋಡೋಣ ಬನ್ನಿ.
ಸಂದರ್ಶನ ದಿನಾಂಕ: 27-03-2025
ಸಂದರ್ಶನ ಸ್ಥಳ: ನಿಗಮದ ಕಚೇರಿ, ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ, ಕಾವೇರಿ ಭವನ, ಬೆಂಗಳೂರು-560009.
ಸಂದರ್ಶನ ಸಮಯ: 11.00 ರಿಂದ ಮಧ್ಯಾಹ್ನ 1.00 ಗಂಟೆಯವರೆಗೆ.
ಅಭ್ಯರ್ಥಿಯ ಮುಖ್ಯ ಅರ್ಹತೆಗಳು :
ಮೊದಲನೆಯದಾಗಿ ಅಭ್ಯರ್ಥಿಯು ಕರ್ನಾಟಕ ಸರ್ಕಾರದ ಯಾವುದೇ ಹುದ್ದೆಯಿಂದ ನಿವೃತ್ತಿಯನ್ನು ಪಡೆದಿರಬೇಕು. ಸಹಾಯಕ ಆಯುಕ್ತ ಅಥವಾ ಅದಕ್ಕಿಂತ ಮೇಲಿನ ಹುದ್ದೆಯಲ್ಲಿ ಕಾರ್ಯವನ್ನು ನಿರ್ವಹಿಸಿರಬೇಕು. ಆಯ್ಕೆಯಾದ ಅಭ್ಯರ್ಥಿಗಳು ಮುಖ್ಯವಾಗಿ ಬಿಡಿಎ, ಕೆಐಎಡಿಬಿ, ಕೆಹೆಚ್ ಬಿ, ಬಿಡಬ್ಲೂ ಎಸ್ ಎಸ್ ಬಿ ಇತರೆ ಇಲಾಖೆಗಳೊಂದಿಗೆ ಸಮನ್ವಯ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಬೇಕು. ಆಸಕ್ತಿಯನ್ನು ಹೊಂದಿರುವ ಅಭ್ಯರ್ಥಿಗಳು ನಿಗದಿತ ದಿನಾಂಕದಂದು ನೇರವಾಗಿ ಹಾಜರಾಗಬೇಕು.
ಅಗತ್ಯವಾದ ದಾಖಲೆಗಳು ಮತ್ತು ಪ್ರಮಾಣ ಪಾತ್ರಗಳು
ಆಧಾರ್ ಕಾರ್ಡ್
ನಿವೃತ್ತ ಪ್ರಮಾಣ ಪತ್ರ
ಬಯೊ ಡೇಟಾ


