ಬೆಂಗಳೂರು : ಕನಿಷ್ಠ ಬೆಂಬಲ ಯೋಜನೆಯಡಿಯಲ್ಲಿ ತೊಗರಿ ಖರೀದಿಯ ನೋಂದಣಿ ಅವಧಿಯನ್ನು ಮಾರ್ಚ ೩೧ ರವರೆಗೆ ವಿಸ್ತರಿಸಲಾಗಿದೆ.
ಕ್ವಿಂಟಾಲ್‌ಗೆ ಕೇಂದ್ರ ಸರ್ಕಾರದಿಂದ 7750 ಮತ್ತು ರಾಜ್ಯ ಸರ್ಕಾರದಿಂದ 450 ರೂಪಾಯಿಗಳನ್ನು ಒಟ್ಟು 8000 ರೂಪಾಯಿಗಳನ್ನು ಸರ್ಕಾರ ನಿಗದಿಪಡಿಸಿದೆ. ಪ್ರೋತ್ಸಾಹ ಧನದ ವಿಚಾರವಾಗಿ ಈ ವರೆಗೆ ಬಂದಿದ್ದ ದೂರುಗಳನ್ನೆಲ್ಲ ಸರಿಪಡಿಸಲಾಗಿದೆ.
ಕೊಡಲೇ ನೋಂದಣಿ ಮಾಡಿಕೊಳ್ಳದ ರೈತರು ಸಮೀಪದಲ್ಲಿರುವ ಪ್ರಾಥಮಿಕ ಪತ್ತಿನ ಸಹಕಾರಿ ಸಂಘ,ರೈತ ಉತ್ಪಾದಕ ಕಂಪನಿಯಲ್ಲಿ ನೊಂದಾಯಿಸಿಕೊಳ್ಳಲು ಕೃಷಿ ಮಾರುಕಟ್ಟೆ ಇಲಾಖಾ ಸಚಿವ ಶಿವಾನಂದ ಪಾಟೀಲ್ ಸ್ಪಷ್ಟನೆ ಪಡಿಸಿದ್ದಾರೆ.