ಏರೋನಾಟಿಕಲ್ ಡೆವಲಪ್ಮೆಂಟ್ ಏಜೆನ್ಸಿಯಲ್ಲಿ ಭರ್ಜರಿ ಉದ್ಯೋಗಾವಕಾಶ,ಆಕರ್ಷಕ ಸಂಬಳ

Share It

 ಒಂದೊಳ್ಳೆ ಉದ್ಯೋಗವನ್ನು ಪಡೆಯಬೇಕೆಂಬ ಹಂಬಲ ಇದ್ಯ ಹಾಗಿದ್ರೆ ಏರೋನಾಟಿಕಲ್ ಡೆವಲಪ್ಮೆಂಟ್ ಏಜೆನ್ಸಿಯು ಖಾಲಿ ಇರುವ ಹುದ್ದೆಗೆ ಅರ್ಜಿಯನ್ನು  ಕರೆದಿದೆ. ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಅರ್ಜಿಯನ್ನು ಸಲ್ಲಿಸುವುದು ಎಲ್ಲಿ ಮತ್ತು ಅಗತ್ಯವಾದ ದಾಖಲೆಗಳು ಯಾವುವು ಎಂಬುದನ್ನು ತಿಳಿಯೋಣ ಬನ್ನಿ.

ಹುದ್ದೆಗಳು ಹಾಗೂ ವೇತನ : 

ಪ್ರಾಜೆಕ್ಟ್‌ ಸೈಂಟಿಸ್ಟ್‌ ಬಿ 105 ಹುದ್ದೆಗಳು , ವೇತನ -19,789 

ಪ್ರಾಜೆಕ್ಟ್‌ ಸೈಂಟಿಸ್ಟ್‌ ಸಿ 32 ಹುದ್ದೆಗಳು, ವೇತನ – 1,08,073

ಹುದ್ದೆಗೆ ಬೇಕಾದ ಅರ್ಹತೆಗಳು

ಪ್ರಾಜೆಕ್ಟ್‌ ಸೈಂಟಿಸ್ಟ್‌ ಬಿ ಹುದ್ದೆಗೆ ಹಾಗೂ ಸಿ ಹುದ್ದೆಗೆ ಕನಿಷ್ಠ 3 ವರ್ಷ ಕಾರ್ಯಾನುಭವವನ್ನು ಹೊಂದಿರಬೇಕು.

ಇಂಜಿನಿಯರಿಂಗ್ ಮತ್ತು ತಾಂತ್ರಿಕ ಶಿಕ್ಷಣವನ್ನು ಪ್ರಥಮ ಶ್ರೇಣಿಯಲ್ಲಿ ಪಾಸ್‌ ಮಾಡಿರಬೇಕು (ಬಿಇ / ಬಿ.ಟೆಕ್).

ಕಂಪ್ಯೂಟರ್ ಸೈನ್ಸ್‌ ಮತ್ತು ಇಂಜಿನಿಯರಿಂಗ್, ಇಲೆಕ್ಟ್ರಾನಿಕ್ಸ್‌ ಅಂಡ್ ಕಮ್ಯುನಿಕೇಷನ್ ಇಂಜಿನಿಯರಿಂಗ್, ಇಲೆಕ್ಟ್ರಿಕಲ್ ಅಂಡ್  ಮೆಕ್ಯಾನಿಕಲ್ ಇಂಜಿನಿಯರಿಂಗ್, ಪ್ರಾಜೆಕ್ಟ್‌ ಸೈಂಟಿಸ್ಟ್‌ ಬಿ ಹುದ್ದೆಗೆ ಹಾಗೂ ಸಿ ಹುದ್ದೆಗೆ ಕನಿಷ್ಠ 3 ವರ್ಷ ಕಾರ್ಯಾನುಭವವನ್ನು ಹೊಂದಿರಬೇಕು,

ಇಲೆಕ್ಟ್ರಿಕಲ್ ಅಂಡ್ ಇಲೆಕ್ಟ್ರಾನಿಕ್ಸ್‌ ಇಂಜಿನಿಯರಿಂಗ್ / , ಮೆಟಾಲರ್ಜಿ ಇಂಜಿನಿಯರಿಂಗ್, ಏರೋನಾಟಿಕಲ್ ಇಂಜಿನಿಯರಿಂಗ್ ವಿಷಯಗಳಲ್ಲಿ ಶಿಕ್ಷಣ ಪಡೆದಿರಬೇಕು.

ವಯೋಮಿತಿ : 

1. ಪ್ರಾಜೆಕ್ಟ್‌ ಸೈಂಟಿಸ್ಟ್‌ ಬಿ ಹುದ್ದೆಗೆ ಗರಿಷ್ಠ 35 ವರ್ಷ ವಯಸ್ಸು ತುಂಬಿರಬಾರದು. 

2. ಪ್ರಾಜೆಕ್ಟ್‌ ಸೈಂಟಿಸ್ಟ್‌ ಸಿ ಹುದ್ದೆಗೆ ಗರಿಷ್ಠ 40 ವರ್ಷ ಮೀರಬಾರದು. 

3. ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ 5 ವರ್ಷ ವಯಸ್ಸಿನ ಸಡಿಲಿಕೆ ಇದೆ.

ಅರ್ಜಿಯನ್ನು ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ.

https://ada.gov.in/adv_130/Registration

ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ 

www.ada.gov.in


Share It

You May Have Missed

You cannot copy content of this page