ಬೆಂಗಳೂರು: ತೆರಿಗೆ ವಂಚನೆ ಸಲುವಾಗಿ ಹೊರರಾಜ್ಯಗಳಿಂದ ಕಾರು ಖರೀದಿಸಿ ರಾಜ್ಯದಲ್ಲಿ ಓಡಿಸುತ್ತಿದ್ದ ಐಷರಾಮಿ ಕಾರುಗಳನ್ನು ಜಪ್ತಿ ಮಾಡಲಾಗಿದೆ.
ರಾಜಧಾನಿ ಬೆಂಗಳೂರಿನಲ್ಲಿ ಕಾರ್ಯಾಚರಣೆ ನಡೆಸಿದ ಸಾರಿಗೆ ಇಲಾಖೆ ಅಧಿಕಾರಿಗಳು, ಸುಮಾರು 400 ಪ್ರಕರಣ ದಾಖಲಿಸಿ 250 ಕಾರುಗಳನ್ನು ಜಪ್ತಿಯನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ಪೋರ್ಶೇ, ಬಿಎಂಡಬ್ಲ್ಯು, ಆಡಿ, ರೇಂಜ್ ರೋವರ್ ಸೇರಿದಂತೆ ಪ್ರಮುಖ ಐಷರಾಮಿ ಕಂಪನಿಗಳ ಕಾರುಗಳನ್ನು ಅಕ್ರಮವಾಗಿ ಓಡಿಸಲಾಗುತ್ತಿತ್ತು. ತೆರಿಗೆಯಿಂದ ತಪ್ಪಿಸಿಕೊಳ್ಳಲು ಹೊರರಾಜ್ಯಗಳಲ್ಲಿ ಖರೀದಿ ಮಾಡಲಾಗಿತ್ತು. ಈ ರೀತಿ ಹೊರರಾಜ್ಯಗಳಲ್ಲಿ ಖರೀದಿ ಮಾಡಿ, ರಾಜ್ಯದಲ್ಲಿ ಓಡಿಸುವಂತಿಲ್ಲ, ಆದರೆ, ಈ ರೀತಿ ತೆರಿಗೆ ವಂಚಿಸಲಾಗುತ್ತಿದೆ ಎಂಬ ಕಾರ್ಯಾಚರಣೆ ನಡೆಸಿ, ವಶಕ್ಕೆ ಪಡೆಯಲಾಗಿದೆ.
ಸಾರಿಗೆ ನಿಯಮಗಳ ಪ್ರಕಾರ ಹೊರರಾಜ್ಯಗಳಿಂದ ತಂದು ಇಲ್ಲಿ ನಿಲ್ಲಿಸುವಂತಿಲ್ಲ, ಈ ಕಾರಣದಿಂದ ಕಾರ್ಯಾಚರಣೆ ನಡೆಸಿ ದಂಡ ವಿಧಿಸಿದ ಸಾರಿಗೆ ಇಲಾಖೆ ಅಧಿಕಾರಿಗಳು ಇಲಾಖೆಗೆ ಇದರಿಂದ ಕೋಟ್ಯಂತರ ರುಪಾಯಿ ತೆರಿಗೆ ನಷ್ಟವಾಗುತ್ತಿದೆ ಎಂದು ತಿಳಿಸಿದ್ದಾರೆ.