ಅಪರಾಧ ಸುದ್ದಿ

ಬೆಳಗಾವಿ ಅಶ್ವತ್ಥಾಮ ಮಂದಿರದ ಮೇಲೆ ಯುವಕನಿಂದ ತೂರಾಟ

Share It

ಬೆಳಗಾವಿ: ಬೆಳಗಾವಿ ಪಾಂಗುಳಗಲ್ಲಿಯ ಅಶ್ವತ್ಥಾಮ ಮಂದಿರದ ಮೇಲೆ ಬುಧವಾರ ರಾತ್ರಿ ಯುವಕನೊಬ್ಬ ಕಲ್ಲು ತೂರಾಟ ನಡೆಸಿದ್ದು, ಕೆಲ ಕಾಲ ಉದ್ವಿಗ್ನ ಸ್ಥಿತಿ ನಿರ್ಮಾಣವಾಯಿತು.

ಉಜ್ಜಲ ನಗರದ ನಿವಾಸಿ ಯಾಸೀರ್ ಎಂಬಾತ ಬುಧವಾರ ರಾತ್ರಿ ದೇಗುಲದ ಮೇಲೆ ಕಲ್ಲು ತೂರಿದ್ದಾನೆ. ತಕ್ಷಣ ಸ್ಥಳೀಯರು ಆತನನ್ನು ಹಿಡಿದು ಕಂಬಕ್ಕೆ ಕಟ್ಟಿಹಾಕಿದ್ದಾರೆ. ಸ್ಥಳೀಯರು ಹಲ್ಲೆಗೆ ಮುಂದಾಗುತ್ತಿದ್ದಂತೆ ಆತ ನಾನು ತಪ್ಪು ಮಾಡಿದ್ದೇನೆ ಕ್ಷಮಿಸಿಬಿಡಿ. ಮೊನ್ನೆ ಒಬ್ಬ ಬುರ್ಖಾ ಹಾಕಿ ಡ್ಯಾನ್ಸ್ ಮಾಡಿದ್ದ. ಅದಕ್ಕೆ ಕಲ್ಲು ತೂರಿದ್ದಾಗಿ ಉತ್ತರ ನೀಡಿದ್ದಾನೆ.

ಮದ್ಯಪಾನದ ನಶೆಯಲ್ಲಿ ಕಲ್ಲು ಹೊಡೆದಿರುವುದಾಗಿ ಬಾಯಿಬಿಟ್ಟಿದ್ದಾನೆ. ಬೆಳಗಾವಿ ಮಾರ್ಕೆಟ್ ಪೊಲೀಸರು ಆಗಮಿಸಿ ಆತನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಆತನಿಗೆ ಶಿಕ್ಷೆ ವಿಧಿಸುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ. ನಗರದಲ್ಲಿ ಅಹಿತಕರ ಘಟನೆ ನಡೆದಂತೆ ಪೊಲೀಸರು ಪಾಂಗುಳಗಲ್ಲಿಯಲ್ಲಿ ಒಂದು ಕೆ ಎಸ್ ಆರ್ ಪಿ ತುಕಡಿ ನಿಯೋಜಿಸಿದ್ದಾರೆ.


Share It

You cannot copy content of this page