ಉಪಯುಕ್ತ ಸುದ್ದಿ

ಕರಾವಳಿ ಭದ್ರತ ಪಡೆಯಲ್ಲಿ ಕೆಲಸ ಮಾಡಲು ಆಸಕ್ತಿ ಇದೆಯೇ? ಸೆಲೆಕ್ಟ್ ಆದ್ರೆ ಸರ್ಕಾರಿ ಸೌಲಭ್ಯ ಫ್ರೀ

Share It

ಸರ್ಕಾರಿ ಉದ್ಯೋಗವನ್ನು ಪಡೆಯಬೇಕೆಂಬ ನಿಮ್ಮ ಕನಸು ನನಸಾಗುವ ಅವಕಾಶವೊಂದಿದೆ. ಎಸ್ ಎಸ್ ಎಲ್ ಸಿ ಹಾಗೂ ಐಟಿಐ ಕೋರ್ಸ್ ಗಳನ್ನು ಮುಗಿಸಿದ್ದಾರೆ ಸಾಕು ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಅಂದಹಾಗೆ ಹುದ್ದೆಯ ಹೆಸರು ಭಾರತ ಕರಾವಳಿ ಭದ್ರತ ಪಡೆಯ ಗ್ರೂಪ್ ಸಿ ಹುದ್ದೆಗಳಿಗೆ ಆಹ್ವಾನ ನೀಡಲಾಗಿದ್ದು ಅರ್ಹ ಅಭ್ಯರ್ಥಿಗಳು ಆಫ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದೆ. 

ಹುದ್ದೆಯ ಹೆಸರು : ಎನ್ರೋಲ್ಡ್ ಪಾಲೋಹರ್ಸ್ 

ಒಟ್ಟು ಹುದ್ದೆಗಳ ಸಂಖ್ಯೆ: 04

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 10-04-2025

ವೇತನ : 21,700-68,100

ವಯೋಮಿತಿ : ಅರ್ಜಿಯನ್ನು ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಠ 18 ವರ್ಷವನ್ನು ಹಾಗೂ ಗರಿಷ್ಠ 25 ವರ್ಷ ತುಂಬಿರವಾರದು. ಪರಿಶಿಷ್ಠ ಜಾತಿ ಹಾಗೂ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ 5 ವರ್ಷದ ವಯೋಮಿತಿಯ ಸಡಿಲಿಕೆಯನ್ನು ನೀಡಿದೆ.

ಆಯ್ಕೆಯ ವಿಧಾನವನ್ನು ನೋಡುವುದಾದರೆ: ಅರ್ಜಿಯನ್ನು ಸಲ್ಲಿಸಿದ ಅಭ್ಯರ್ಥಿಗೆ ಲಿಖಿತ ಪರೀಕ್ಷೆಯನ್ನು ನಡೆಸಲಾಗುವು. ಜೊತೆಗೆ ದೈಹಿಕ ಪರೀಕ್ಷೆ ನಡೆಸಲಾಗುವುದು. ಆಯ್ಕೆಯಾದ ಅಭ್ಯರ್ಥಿಗಳನ್ನು ಭಾರತದ ಯಾವುದೇ ಕರಾವಳಿ ತೀರದ ಭದ್ರತೆಗೆ ಸೇರಿಸಬಹುದಾಗಿದೆ.

ಅರ್ಜಿ ಸಲ್ಲಿಸುವ ವಿಧಾನ :

ಪ್ರಕಟಣೆಯಲ್ಲಿ ತಿಳಿಸಿರುವಂತೆ ಆಫ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಮೊದಲು ವೆಬ್ ಸೈಟ್ ಗೆ ಹೋಗಿ ಅರ್ಜಿಯನ್ನು ಡೌನ್ಲೋಡ್ ಮಾಡಿಕೊಂಡು ಬಳಿಕ ಅರ್ಜಿಯನ್ನು ತುಂಬಿ ಅಗತ್ಯ ದಾಖಲೆಗಳನ್ನು ಅದಕ್ಕೆ ಲಗತ್ತಿಸಬೇಕು. ಬಳಿಕ ಪೋಸ್ಟ್ ಮಾಡಬೇಕು. ಪೋಸ್ಟ್ ಮಾಡುವಾಗ ಲೇಟರ್ ಹೆಡ್ ಮೇಲೆ ಯಾವ ಹುದ್ದೆಗೆ ಎಂದು ಬರೆಯುವುದು ಖಡ್ಡಾಯ ಎಂದು ತಿಳಿಸಲಾಗಿದೆ. 

ಅರ್ಜಿ ಸಲ್ಲಿಸಬೇಕಾದ ಸ್ಥಳ: The President, (EF Recruitment Board), Coast Guard District Headquarters No.3, Post Box No.19, Panambur, New Mangalore – 575010.

ಅರ್ಜಿಯನ್ನು ಡೌನ್ಲೋಡ್ ಮಾಡಲು ಭೇಟಿ ನೀಡಿ:

https://joinindiancoastguard.cdac.in

ಅಭ್ಯರ್ಥಿಗಳು ದೇಹದ ಸದೃಢತೆ, ಎತ್ತರ, ತೂಕ, ಕಡೆಗಣನೆ ಮಾಡುವಂತಿಲ್ಲ. ಆಯ್ಕೆಯಾದ ಅಭ್ಯರ್ಥಿಗೆ ಕೇಂದ್ರ ಸರ್ಕಾರದಿಂದ ನೀಡುವಂತಹ ಪ್ರಯಾಣ ಭತ್ಯೆ, ಮನೆ ಬಾಡಿಗೆ ಭತ್ಯೆ, ವೈದ್ಯಕೀಯ ಸೌಲಭ್ಯಗಳು ದೊರೆಯಲಿವೆ.


Share It

You cannot copy content of this page