ಭಾರತದಲ್ಲಿ ಶುರುವಾಯ್ತು ಟ್ರಂಪ್ ರಿಯಲ್ ಎಸ್ಟೇಟ್ ವ್ಯವಹಾರ: ಪುಣೆಯಲ್ಲಿ 2,500 ಕೋಟಿ ರು. ಹೂಡಿಕೆ
ಬೆಂಗಳೂರು: ಅಮೇರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾಲೀಕತ್ವದ ಟ್ರಂಪ್ ಆರ್ಗನೈಸೇಶನ್ ಭಾರತದ ರಿಯಲ್ ಎಸ್ಟೇಟ್ ವ್ಯವಹಾರಕ್ಕೆ ಲಗ್ಗೆಯಿಟ್ಟಿದ್ದು, ಪುಣೆಯಲ್ಲಿ 2,500 ಕೋಟಿ ಹೂಡಿಕೆಗೆ ಸಜ್ಜಾಗಿದೆ.
ಪುಣೆಯಲ್ಲಿ ಟ್ರಂಪ್ ವಲ್ಡ್ ಸೆಂಟರ್ ಹೆಸರಿನ ವಾಣಿಜ್ಯ ರಿಯಲ್ ಎಸ್ಟೇಟ್ ಉದ್ಯಮ ಆರಂಭವಾಗಲಿದೆ. ಇದು ಅಮೇರಿಕದ ಹೊರಗೆ ಆರಂಭಗೊಳ್ಳುತ್ತಿರುವ ಮೊದಲ ಟ್ರಂಪ್ ಟವರ್ ಆಗಿದ್ದು, ಭಾರತದಲ್ಲಿ ಸ್ಥಳೀಯ ಹೂಡಿಕೆದಾರರ ಸಹಯೋಗದೊಂದಿಗೆ 2,500 ಬಂಡವಾಳ ಹೂಡಲು ಟ್ರಂಪ್ ಆರ್ಗನೈಸೇಶನ್ ತೀರ್ಮಾಬಿಸಿದೆ. ಈ ಕುರಿತು ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದೆ.
4.3 ಎಕರೆ ಜಾಗದಲ್ಲಿ ಟ್ರಂಪ್ ವಲ್ಡ್ ಟವರ್ ನಿರ್ಮಾಣವಾಗುತ್ತಿದ್ದು, ಟ್ರಿಬೆಕಾ ಡೆವಲಪರ್ಸ್ ಮತ್ತು ಕುಂದನ್ ಸ್ಪೇಸ್ ಜತೆಗಿನ ಪಾಲುದಾರಿಕೆಯಲ್ಲಿ ಟ್ರಂಪ್ ಟವರ್ ನಿರ್ಮಾಣವಾಗಲಿದೆ. ಪ್ರಸ್ತುತ ಟವರ್ ವಾಣಿಜ್ಯ ಮಳಿಗೆಗಳಿಗೆ ಮಾತ್ರವೇ ಸೀಮಿತವಾಗಿದ್ದು, ಲಕ್ಸುರಿ ಹೋಟೆಲ್, ಸಾಫ್ಟ್‌ವೇರ್ ಕಂಪನಿಗಳು, ಬ್ಯಾಂಕ್ ಬ್ರಿಕ್ಸ್ ಮತ್ತು ಬ್ರ್ಯಾಂಡಿಂಗ್ ಉತ್ಪನ್ನಗಳ ವಾಣಿಜ್ಯ ಕೇಂದ್ರವಾಗಲಿದೆ.
ಈ ನಡುವೆ ಟ್ರಂಪ್ ಆರ್ಗನೈಸೇಶನ್ ಪಾಲುದಾರಿಕೆಯಲ್ಲಿ ಮುಂಬೈ, ಪುಣೆ, ಕೊಲ್ಕತ್ತಾ ಹಾಗು ಗುರುಗ್ರಾಮದಲ್ಲಿ ಬಹುಮಹಡಿ ವಸತಿ ಸಮುಚ್ಚಯಗಳ ನಿರ್ಮಾಣಕ್ಕೆ ಹೂಡಿಕೆ ಮಾಡಲಿದೆ. ಮುಂದಿನ ಆರು ವರ್ಷದಲ್ಲಿ ಗಾಲ್ಫ್ ಕೋರ್ಸ್, ಕಚೇರಿ ಸಮುಚ್ಚಯ ಹಾಗೂ ವಿಲ್ಲಾ ಗಳ ಯೋಜನೆಯನ್ನು ಬೆಂಗಳೂರು, ಹೂದರಾಬಾದ್, ನೋಯ್ಡಾ, ಗುರುಗ್ರಾಮ, ಮುಂಬಯಿ, ಪುಣೆಯಲ್ಲಿ ವಿಸ್ತರಣೆ ಮಾಡುವ ಯೋಜನೆಯನ್ನು ಟ್ರಂಪ್ ಆರ್ಗನೈಸೇಶನ್ ಮಾಡಿಕೊಂಡಿದೆ.


