ವಿನಾಯಕ ಶೇಟ್‌ಗೆ ನಾಲ್ಮಡಿ ಕೃಷ್ಣರಾಜ ಒಡೆಯರ್ ಪ್ರಶಸ್ತಿ

Share It

ಉತ್ತರ ಕನ್ನಡ : ಮುಂಡಗೋಡದ ಕರಗಿನಕೊಪ್ಪ ಗ್ರಾಮದ ಲೊಲೋಲಾ ಅನುದಾನಿತ ಪ್ರೌಢ ಶಾಲೆ ಶಿಕ್ಷಕ ಹಾಗೂ ರಂಗಭೂಮಿ ಕಲಾವಿದ ವಿನಾಯಕ ಶೇಟ್ ಅವರಿಗೆ ನಾಲ್ಮಡಿ ಕೃಷ್ಣರಾಜ ಒಡೆಯರ್ 2025 ನೇ ಸಾಲಿನ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಬುಧವಾರ ಬೆಂಗಳೂರ ರವೀಂದ್ರ ಕಲಾಕ್ಷೇತ್ರ ನಯನ ಸಭಾಂಗಣದಲ್ಲಿ ಪ್ರಜಾ ಹಿತ ಸಂರಕ್ಷಣಾ ಚಾರಿಟೇಬಲ್ ಟ್ರಸ್ಟ್ ಶಕ್ತಿ ಮೀಡಿಯಾ ಕ್ರಿಯೇಶನ್ಸ್ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಹಯೋಗದೊಂದಿಗೆ ಸರಿಗಮ ಲಹರಿ ರಸಮಂಜರಿ ಕಾರ್ಯಕ್ರಮ ಹಾಗೂ 2025 ನೇ ಸಾಲಿನ ಪ್ರತಿಷ್ಠಿತ ಪ್ರಶಸ್ತಿ ನಾಲ್ಮಡಿ ಕೃಷ್ಣರಾಜ ಒಡೆಯರ್ ರಾಜ್ಯ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಯಿತು.

ಬೆಂಗಳೂರು ಸಚಿವರಾಶ್ರಮದ ವಿಶ್ವ ಸಂತೋಷ ದಿವ್ಯ ಸಾನಿಧ್ಯವಹಿಸಿದ್ದರು. ಹಿರಿಯ ಚಿತ್ರ ನಿರ್ದೇಶಕ ಸಾಯಿ ಪ್ರಕಾಶ್, ಖ್ಯಾತ ಗಾಯಕ ಶಶಿಧರ್ ಕೋಟೆ, ಡಿ ಬಲರಾಮ್, ಲೆಫ್ಟಿನೆಂಟ್ ಕರ್ನಲ್ ದಿವಾಕರ್ ಬಾಬು ನಾಯ್ಡು, ಉತ್ತರ ಕರ್ನಾಟಕದ ಹೆಮ್ಮೆಯ ಮೇರು ರಂಗಭೂಮಿ ಕಲಾವಿದ ಅದರಗುಂಜಿ ಶಿವಣ್ಣ, ಡಾಕ್ಟರ್ ಎಂ ವಿಜಯನ್, ಡಾ. ಸಂಜಯ್ ಕುಮಾರ್, ಕೆ ಗೋಪಾಲಕೃಷ್ಣ ಎನ್ ರಂಗಸ್ವಾಮಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.


Share It

You May Have Missed

You cannot copy content of this page