ಒಂದು ರಾಜ್ಯ ಒಂದು ಗ್ರಾಮೀಣ ಬ್ಯಾಂಕ್’ ಯೋಜನೆ ಜಾರಿ

Implementation of the 'One State, One Rural Bank' scheme
Share It

ನವದೆಹಲಿ: ಗ್ರಾಮೀಣ ಬ್ಯಾಂಕುಗಳ ಕಾರ್ಯಾಚರಣೆಯಲ್ಲಿ ಸುಧಾರಣೆ ತರಲು ಕೇಂದ್ರ ಸರ್ಕಾರ ಒಂದು ರಾಜ್ಯ ಒಂದು ಪ್ರಾದೇಶಿಕ ಗ್ರಾಮೀಣ ಬ್ಯಾಂಕ್(RRB) ಯೋಜನೆಯನ್ನು ಜಾರಿಗೆ ತರಲಿದೆ.

ಕರ್ನಾಟಕದ ಎರಡು ಗ್ರಾಮೀಣ ಬ್ಯಾಂಕುಗಳ ವಿಲೀನವಾಗಲಿವೆ. ಕರ್ನಾಟಕ ಸೇರಿ 11 ರಾಜ್ಯಗಳಲ್ಲಿ ಒಂದಕ್ಕಿಂತ ಹೆಚ್ಚಿರುವ 15 ಗ್ರಾಮೀಣ ಬ್ಯಾಂಕುಗಳನ್ನು ವಿಲೀನ ಮಾಡಲಾಗುವುದು.

ರಾಜ್ಯದಲ್ಲಿ ಕರ್ನಾಟಕ ಗ್ರಾಮೀಣ ಬ್ಯಾಂಕ್ ಮತ್ತು ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಎಂಬ ಎರಡು ಗ್ರಾಮೀಣ ಬ್ಯಾಂಕುಗಳು ನಿರ್ವಹಿಸುತ್ತಿವೆ. ಮೇ 1ರಿಂದ ಕರ್ನಾಟಕ ಗ್ರಾಮೀಣ ಬ್ಯಾಂಕ್‌ ನೊಂದಿಗೆ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್‌ ವಿಲೀನವಾಗಲಿದ್ದು, ಕೆನರಾ ಬ್ಯಾಂಕ್ ಈ ಬ್ಯಾಂಕಿನ ಪ್ರಾಯೋಜಕತ್ವ ಬ್ಯಾಂಕ್ ಆಗಿರಲಿದೆ. ಈ ವಿಲೀನ ಪ್ರಕ್ರಿಯೆ ನಂತರ ದೇಶದಲ್ಲಿ ಹಾಲಿ ಇರುವ 43 ಗ್ರಾಮೀಣ ಬ್ಯಾಂಕುಗಳ ಸಂಖ್ಯೆ 28ಕ್ಕೆ ಇಳಿಕೆಯಾಗಲಿದೆ.


Share It

You May Have Missed

You cannot copy content of this page