ಎಂಬಿಬಿಎಸ್ನಲ್ಲಿ ಅವಳಿ ಸಹೋದರಿಯರ ಅಪರೂಪದ ಸಾಧನೆ: ಇಬ್ಬರದ್ದು ಸೇಮ್ ಟು ಸೇಮ್ ಸ್ಕೋರ್
ಅಹಮದಾಬಾದ್: ಎಂಬಿಬಿಎಸ್ನಲ್ಲಿ ಸಮಾನ ಅಂಕಗಳಿಸುವುದೇ ಕಷ್ಟ. ಅಂತಹದ್ದರಲ್ಲಿ ಅವಳಿ ಸಹೋದರಿಯರು ಸೇಮ್ ಟು ಸೇಮ್ ಸ್ಕೋರ್ ಮಾಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ವಡೋದರಾದ ಜಿಎಂಇಆರ್ಎಸ್ ವೈದ್ಯಕೀಯ ಕಾಲೇಜಿನಲ್ಲಿ ಅಂತಿಮ ವರ್ಷದ ಎಂಬಿಬಿಎಸ್ ವಿದ್ಯಾಭ್ಯಾಸ ಮಾಡುತ್ತಿದ್ದ ಅವಳಿ ಸಹೋದರಿಯರಾದ ರಿಬಾ ಮತ್ತು ರಹಿನ್ ಹಫೆಜ್ಜಿ ಅಂತಿಮ ವರ್ಷದಲ್ಲಿ 935 ಅಂಕಗಳನ್ನು ಪಡೆದುಕೊಂಡಿದ್ದಾರೆ.
ಕಳೆದ 24 ವರ್ಷಗಳಿಂದಲೂ ತಮ್ಮ ಅವಳಿ ನಡವಳಿಕೆಗಳಿಂದ ಗಮನಸೆಳೆದಿರುವ ಈ ಸಹೋದರಿಯರು ಇದೀಗ ತಮ್ಮ ಎಂಬಿಬಿಎಸ್ ನಲ್ಲೂ ಇಂತಹದ್ದೊAದು ಅಪರೂಪದ ಸಾಧನೆ ಮಾಡಿದ್ದಾರೆ. ಶಿಕ್ಷಕಿ ಗುಲ್ಷಾದ್ ಭಾನು ಪುತ್ರಿಯರಾದ ಈ ಇಬ್ಬರು ಸಹೋದರಿಯರು ಅಪರೂಪದ ಸಾಧನೆಗೆ ಭಾಜನರಾಗಿದ್ದಾರೆ.
10 ನೇ ತರಗತಿಯಲ್ಲಿ ರಿಬಾ ಶೇ99 ರಷ್ಟು ಹಾಗೂ ರಹಿನ್ ಶೇ. 98.5 ಅಂಕ ಗಳಿಸಿದ್ದರು. 12 ನೇ ತರಗತಿಯಲ್ಲಿ ಅವರು ಕ್ರಮವಾಗಿ 98.2 ಮತ್ತು 97.3 ಅಂಕ ಪಡೆದಿದ್ದರು. ತರಬೇತಿಗೆ ಹಾಜರಾಗದೆ ನೀಟ್ ಯುಜಿ ಪರೀಕ್ಷೆಯಲ್ಲಿ ರಿಬಾ ಶೇ.97 ಹಾಗೂ ರಹಿನ್ ಶೇ.97.7 ಅಂಕ ಗಳಿಸಿದ್ದರು.


