ಬೆಂಗಳೂರು: ಜಯನಗರ ಆಟದ ಮೈದಾನ ಬೈರಸಂದ್ರದಲ್ಲಿ, ಇಂದು ಜಯನಗರ ಆಟದ ಮೈದಾನದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಕ್ರೀಡಾ ಮತ್ತು ಸಾಂಸ್ಕೃತಿಕ ಅಕಾಡೆಮಿ ವತಿಯಿಂದ ನಮ್ಮ ಸಂಸ್ಕೃತಿ ಸಾಂಸ್ಕೃತಿಕ ಬೇಸಿಗೆ ಶಿಬಿರವನ್ನು ಸಾರಿಗೆ ಹಾಗೂ ಮುಜರಾಗಿ ಇಲಾಖೆ ಸಚಿವರಾದ ರಾಮಲಿಂಗ ರೆಡ್ಡಿ ಅವರು ದೀಪ ಬೆಳಗಿಸುವ ಮೂಲಕ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಲಈ ಕಾರ್ಯಕ್ರಮದಲ್ಲಿ ನವ ಪ್ರತಿಭೆಗಳ ಅನ್ವೇಷಣೆ ಹಾಗೂ ತರಬೇತಿ ,ನೃತ್ಯ ,ಹಳ್ಳಿಯ ಸೊಗಡು ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು .
ಈ ಸಂದರ್ಭದಲ್ಲಿ ಜಯನಗರ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರು ಹಾಗೂ ಮಾಜಿ ಪಾಲಿಕೆ ಸದಸ್ಯರಾದ ಎನ್. ನಾಗರಾಜ ರವರು ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರು, ವಿವಿಧ ಸಂಘ ಸಂಸ್ಥೆಗಳ ನಾಗರಿಕರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.