ಸುದ್ದಿ

ಬೆಲೆ ಏರಿಕೆ ಸರಣಿಯಲ್ಲಿ ಇದೀಗ ಶಾಲಾಮಕ್ಕಳ ಪಠ್ಯಪುಸ್ತಕದ ಸರದಿ!

Share It

ಬೆಂಗಳೂರು: ಹಾಲು, ನೀರು, ವಿದ್ಯುತ್, ಬಸ್ ಪ್ರಯಾಣ ದರ ಮತ್ತಿತರ ಬೆಲೆ ಏರಿಕೆಯಿಂದ ತತ್ತರಿಸಿರುವ ರಾಜ್ಯದ ಜನರು ಪಠ್ಯಪುಸ್ತಕ ದರದ ಹೆಚ್ಚಳವನ್ನು ಸಹಿಸಿಕೊಳ್ಳಬೇಕಾಗಿದೆ. ಈ ಬಾರಿ ಪಠ್ಯಪುಸ್ತಕದ ದರ ಶೇಕಡಾ 10 ರಷ್ಟು ಏರಿಕೆಯಾಗಲಿದೆ. ದರ ಏರಿಕೆಯನ್ನು ಕರ್ನಾಟಕ ಟೆಕ್ಸ್ ಬುಕ್ ಸೊಸೈಟಿ ಖಚಿತಪಡಿಸಿದೆ.

ಖಾಸಗಿ ಶಾಲೆಗಳಿಂದ ಡಿಸೆಂಬರ್ ತಿಂಗಳಲ್ಲಿ ಇಂಡೆಂಟ್ ಪಡೆದಿದ್ದ ಸಂಸ್ಥೆ ಮುಂಗಡ ಶೇ.10ರಷ್ಟು ಹಣವನ್ನು ಆನ್ ಲೈನ್ ಮೂಲಕ ಪಾವತಿಸಿಕೊಂಡಿತ್ತು. ಖಾಸಗಿ ಶಾಲೆಗೆ ಇಂಡೆಂಟ್ ಪಡೆದಿದ್ದಕ್ಕಿಂತ ಶೇ.10 ರಷ್ಟು ದರ ಹೆಚ್ಚಳ ಮಾಡಿರುವುದು ಪೋಷಕರಿಗೆ ಹೊರೆಯಾಗಿ ಪರಿಣಮಿಸುವುದು ಖಚಿತವಾಗಿದೆ.

ಶಾಲಾ ಪಠ್ಯಪುಸ್ತಕದ ಬೆಲೆ ಏರಿಕೆ ವಿಚಾರ ಕುರಿತಂತೆ ಪ್ರತಿಕ್ರಿಯಿಸಿರುವ ಕ್ಯಾಮ್ಸ್ ಪ್ರಧಾನ ಕಾರ್ಯದರ್ಶಿ ಶಶಿಕುಮಾ‌ರ್ ಅವರು, ಕೇವಲ 10% ಅಲ್ಲ, ಕೆಲ ಪುಸ್ತಕಗಳ ಮೇಲೆ 100% ವರೆಗೂ ದರ ಏರಿಕೆ ಮಾಡಿದೆ ಎಂದು ಮಾಹಿತಿ ನೀಡಿದ್ದಾರೆ.

ಇದರ ಹೊರೆಯನ್ನ ಖಾಸಗಿ ಶಾಲೆಗಳು ಪೋಷಕರ ಮೇಲೇನೇ ಹಾಕಬೇಕಾಗುತ್ತೆ. ಶಾಲಾ ಶುಲ್ಕದ ಜೊತೆಗೆ ಪಠ್ಯ ಪುಸ್ತಕದ ದರವನ್ನ ಸೇರಿಸೋದು ಅವಶ್ಯಕತೆ ಇರುತ್ತೆ ಎಂದಿದ್ದಾರೆ. ಈಗಾಗಲೇ ಎಲ್ಲದರ ಬೆಲೆ ಏರಿಕೆಯಾಗಿರೋದರಿಂದ ಜನರಿಗೆ ತೊಂದರೆ ಆಗ್ತಾ ಇದೆ ಎಂದು ಸಾಕಷ್ಟು ಬಾರಿ ನಾವು ಸರ್ಕಾರಕ್ಕೂ ಮನವಿ ಮಾಡಿದ್ದೇವೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ ಹೀಗಾಗಿ ಪಠ್ಯ ಪುಸ್ತಕ ದರವನ್ನು ಅನಿವಾರ್ಯವಾಗಿ ಏರಿಕೆ ಮಾಡಬೇಕಿದೆ ಎಂದಿದ್ದಾರೆ.


Share It

You cannot copy content of this page