ಪದ್ಮನಾಭ ನಗರದಲ್ಲಿ ನಮ್ಮ ಸಂಸ್ಕೃತಿ ಬೇಸಿಗೆ ಶಿಬಿರ:
ಬೆಂಗಳೂರು: ಪದ್ಮನಾಭನಗರ ವಿಧಾನಸಭಾ ಕ್ಷೇತ್ರದ 5 ವರ್ಷದಿಂದ 20 ವರ್ಷದ ಮಕ್ಕಳಿಗೆ ಯೋಗ, ಸಂಗೀತ ಮತ್ತು ನೃತ್ಯ ವಿಭಾಗಗಳಲ್ಲಿ ಉಚಿತ ತರಬೇತಿ ನೀಡುವ ಬೇಸಿಗೆ ಶಿಬಿರ ಆಯೋಜನೆ ಮಾಡಲಾಗಿದ್ದು, ನೂರಾರು ಮಕ್ಕಳು ಉತ್ಸಾಹದಿಂದ ಪಾಲ್ಗೊಂಡಿದ್ದಾರೆ.
ಪದ್ಮನಾಭ ನಗರದ ಗ್ಯಾರಂಟಿ ಸಮಿತಿ ಅಧ್ಯಕ್ಷ ಪ್ರಮೋದ್ ಶ್ರೀನಿವಾಸ್ ನೇತೃತ್ವದಲ್ಲಿ ಆಯೋಜನೆಯಾಗಿರುವ ಶಿಬಿರವನ್ನು ಚಿಗುರು ನೃತ್ಯಾಲಯದ ಸರಿತಾ ಸತ್ಯ ಪ್ರಸಾದ್ ಕೊಟ್ಟಾರಿ ಅವರು ಉದ್ಘಾಟನೆ ಮಾಡಿದ್ದರು.ಇದೀಗ ಪ್ರತಿನಿತ್ಯ ನೂರಾರು ವಿದ್ಯಾರ್ಥಿಗಳು ಭಾಗವಹಿಸುವ ಮೂಲಕ ಶಿಬಿರದ ಉಪಯೋಗ ಪಡೆಯುತ್ತಿದ್ದಾರೆ.

ನೂರಾರು ಮಕ್ಕಳು ತಮ್ಮ ಪೋಷಕರ ಜೊತೆ ಆಗಮಿಸಿದ್ದು ಬೇಸಿಗೆ ಶಿಬಿರದಲ್ಲಿ ಉತ್ಸಾಹದಿಂದ ಪಾಲ್ಗೊಂಡರು. ಶಿಕ್ಷಣ ಎಂದರೆ ಕೇವಲ ಪುಸ್ತಕ ಜ್ಞಾನವಲ್ಲ, ದೈಹಿಕ, ಸಾಂಸ್ಕೃತಿಕ, ಮಾನಸಿಕ ಮತ್ತು ನೈತಿಕ ಜ್ಞಾನವನ್ನು ವೃದ್ಧಿ ಮಾಡಿಕೊಳ್ಳುವುದು. ಈ ನಿಟ್ಟಿನಲ್ಲಿ ಪದ್ಮನಾಭ ನಗರ ವ್ಯಾಪ್ತಿಯ ಮಕ್ಕಳು ಸಾಂಸ್ಕೃತಿಕವಾಗಿ ಬೆಳೆಯಲು ಒಂದು ವೇದಿಕೆ ನೀಡಬೇಕು ಎಂದು ಈ ಶಿಬಿರವನ್ನು ಆಯೋಜಿಸಲಾಗಿದೆ ಎಂದು ಪ್ರಮೋದ್ ಶ್ರೀನಿವಾಸ್ ತಿಳಿಸಿದ್ದಾರೆ.


