ಕಪ್ಪು ಚರ್ಮ ಎಂದು ಅವಹೇಳನ ಮಾಡಿದ ಅತ್ತೆ, ಭಾವ: ನಾಲ್ಕು ತಿಂಗಳ ಹಿಂದೆ ಮದುವೆಯಾಗಿದ್ದ ಮಹಿಳೆ ಆತಹತ್ಯೆ
ದಾವಣಗೆರೆ: ಅತ್ತೆ ಮತ್ತು ಭಾವನ ವರ್ಣ ಬೇಧ ನೀತಿಗೆ ಬೇಸತ್ತು, ನಾಲ್ಕು ತಿಂಗಳ ಹಿಂದೆ ಮದುವೆಯಾಗಿದ್ದ ಗೃಹಿಣಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗದಗ ಜಿಲ್ಲೆಯಲ್ಲಿ ನಡೆದಿದೆ.
ಬೆಟಗೇರಿ ಗದಗ ನಗರದ ಶರಣಬಸವೇಶ್ವರ ನಗರದಲ್ಲಿ ವಾಸವಿದ್ದ ಪೂಜಾ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಸಂಬಂಧ ಪೊಲೀಸರು ಅವರ ಅತ್ತೆ ಶಶಿಕಲಾ ಮತ್ತು ಭಾವ ವೀರಣ್ಣಗೌಡನನ್ನು ಬಂಧಿಸಿ ವಿಚಾರಣೆ ಕೈಗೊಂಡಿದ್ದಾರೆ.
ಪೂಜಾ ಮೂಲತ ಬಳ್ಳಾರಿ ಮೂಲದವರಾಗಿದ್ದು, ನಾಲ್ಕು ತಿಂಗಳ ಹಿಂದೆ ಬೆಟಗೇರಿಗೆ ಮದುವೆ ಮಾಡಿಕೊಡಲಾಗಿತ್ತು. ಮದುವೆಯಾಗಿ ಮನೆಗೆ ಬಂದ ಆಕೆಗೆ ಅತ್ತೆ ಶಶಿಕಲಾ ಮತ್ತು ಭಾವ ವೀರಣ್ಣ ಗೌಡ ಕಿರುಕುಳ ನೀಡುತ್ತಿದ್ದರು. ಆಕೆಯ ಕಪ್ಪು ಚರ್ಮದ ಕುರಿತು ಟೀಕೆ ಮಾಡಿ, ಹಿಯಾಳಿಸುತ್ತಿದ್ದರು ಎನ್ನಲಾಗಿದೆ.
ಈ ಸಂಬಂಧ ಪೂಜಾ ಪೋಷಕರು ನೀಡಿರುವ ದೂರಿನ ಅನ್ವಯ ಇಬ್ಬರು ಬಂಧಿಸಿರುವ ಗದಗ ಪೊಲೀಸರು, ಆಕೆಯ ಪತಿ ಅಮರೇಶ್, ಪೂಜಾಳನ್ನು ತಾನು ಕೆಲಸ ಮಾಡುವ ಶಹಾಪೂರಕ್ಕೆ ಕರೆದೊಯ್ಯುವ ಆಲೋಚನೆಯಲ್ಲಿದ್ದ ಎನ್ನಲಾಗಿದೆ. ಆದರೆ ಅಷ್ಟರಲ್ಲಿ ಪೂಜಾ ತನ್ನ ಅತ್ತೆಯ ಮನೆಯಲ್ಲಿ ಏ.15 ರಂದು ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.


