1 ನೇ ತರಗತಿಯಿಂದಲೇ ಹಿಂದಿ ಕಲಿಕೆ : ಮಹಾರಾಷ್ಟ್ರ ಸರಕಾರದಿಂದಲೇ ವ್ಯಾಪಕ ವಿರೋಧ
ಮುಂಬಯಿ: ಹಿಂದಿ ಹೇರಿಕೆ ವಿರುದ್ಧ ವ್ಯಾಪಕ ವಿರೋಧ ವ್ಯಕ್ತವಾಗುತ್ತಿರುವ ಬೆನ್ನಲ್ಲೇ ಮಹಾರಾಷ್ಟ್ರ ಸರಕಾರ ಹಿಂದಿ ಕಲಿಕೆಗೆ ವಿರೋಧಿಸಿರುವ ಮಹತ್ವದ ಬೆಳವಣಿಗೆ ಕಂಡುಬಂದಿದೆ.
ಸರಕಾರ ನೇಮಿಸಿರುವ ಭಾಷಾ ಸಲಹಾ ಸಮಿತಿ, ರಾಜ್ಯ ಸರಕಾರದ ಶಾಲೆಗಳಲ್ಲಿ ಒಂದನೇ ತರಗತಿಯಿಂದ ಐದನೇ ತರಗತಿವರೆಗಿನ ಮಕ್ಕಳಿಗೆ ಹಿಂದಿ ಕಲಿಸುವುದನ್ನು ವಿರೋಧಿಸಿದೆ. ಈ ನಿಟ್ಟಿನಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲು ರಾಜ್ಯ ಸರಕಾರಕ್ಕೆ ಸಲಹೆ ನೀಡಿದೆ.
ಮರಾಠಿ ಮತ್ತು ಇಂಗ್ಲೀಷ್ ಜತೆಗೆ ಒಂದನೇ ತರಗತಿಯಿಂದಲೇ ಹಿಂದಿಯನ್ನು ಮೂರನೇ ಭಾಷೆಯಾಗಿ ಕಲಿಸುವ ಸಂಬಂಧ ಪ್ರಸ್ತಾವನೆ ಮಾಡಲಾಗಿದ್ದು, ಈ ಪ್ರಸ್ತಾವನೆಯನ್ನು ಭಾಷಾ ಸಲಹಾ ಸಮಿತಿ ತಿರಸ್ಕರಿಸಿದೆ.
NEP ಅಡಿಯಲ್ಲಿ ಮೂರನೇ ಭಾಷೆಯಾಗಿ ಹಿಂದಿ ಕಲಿಸುವ ಪ್ರಸ್ತಾಪ ಸರಕಾರದ ಮುಂದಿದ್ದು, ಸಮಿತಿ ಸಿಎಂ ಪಡ್ನವೀಸ್ ಗೆ ಪತ್ರ ಬರೆದು ಹಿಂದಿ ಕಲಿಕೆಯನ್ನು ವಿರೋಧಿಸಿದೆ. ಈಗಾಗಲೇ ತಮಿಳುನಾಡು ಈ ನಿಟ್ಟಿನಲ್ಲಿ ಕೇಂದ್ರ ಸರಕಾರ ಹಾಗೂ NEP ವಿರುದ್ಧ ವ್ಯಾಪಕ ಹೋರಾಟ ರೂಪಿಸಿದೆ. ಇದೀಗ ಸ್ವತಃ ಬಿಜೆಪಿ ಸರಕಾರವೇ ಅಸ್ತಿತ್ವದಲ್ಲಿದ್ದರೂ, ಭಾಷಾ ವಿಚಾರದಲ್ಲಿ ವಿರೋಧ ವ್ಯಲ್ತವಾಗಿರುವುದು ಗಮನಾರ್ಹ.


